ಸಮಗ್ರ ಬೇಂದ್ರೆ ವಿಮರ್ಶೆ

₹1,250.00

In stock

ಡಾ║ ಜಿ ಎಸ್ ಆಮೂರ

ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ

ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.

ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622

₹1,250.00

Description

ಬೇಂದ್ರೆಯವರ ಸಾಹಿತ್ಯದ ಮೇಲೆ ಅಲ್ಲಿ ಇಲ್ಲಿ ಕೆಲವು ಲೇಖನಗಳು, ಅವರ ಕಾವ್ಯದ ಮೇಲೆ ಒಂದೆರಡು ಗ್ರಂಥಗಳು ಬಂದಿದ್ದರೂ ಸಮಗ್ರವಾಗಿ ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ, ಅವರ ಸಾಹಿತ್ಯ ಮೇಲೆ ಬಂದಿರುವ ಎಲ್ಲ ವಿಮರ್ಶೆಗಳನ್ನೂ ಗಮನಿಸಿ, ತಮ್ಮ ಕೃತಿಗಳ ಮೇಲೆ ಬೇಂದ್ರೆಯವರೆ ಹೇಳಿರುವ ಮಾತುಗಳನ್ನೆಲ್ಲ ಸಂಗ್ರಹಿಸಿ, ಸಮೀಕ್ಷೆ ನಡೆಸಿ, ಬೇಂದ್ರೆಯವರು ಯಾವ ಯಾವ ಕೃತಿಗಳಿಂದ, ಸಾಹಿತಿಗಳಿಂದ ಪ್ರಭಾವಿತರಾದರು. ಆ ಪ್ರಭಾವಗಳನ್ನೆಲ್ಲ ಮೀರಿ ನಿಂತು ಅವರ ಕೃತಿಗಳು ಹೇಗೆ ಸ್ವತಂತ್ರ ಕೃತಿಗಳಾಗಿ ಕನ್ನಡ ಕಾವ್ಯ ಸಂಪ್ರದಾಯದಲ್ಲೇ ಅನನ್ಯವಾಗಿವೆ ಎಂಬುದನ್ನು ಇಲ್ಲಿ ಸವಿಸ್ತಾರವಾಗಿ ಚಿತ್ರಿಸಿ ಶ್ರೀ ಆಮೂರರು ಬೇಂದ್ರೆಯವರ ಸಾಹಿತ್ಯದ ಆಳವಾದ ಅಭ್ಯಾಸಕ್ಕೆ ತುಂಬ ಸಹಕಾರಿಯಾಗುವಂತೆ ರಚಿಸಿದ ಕೃತಿ ಇಲ್ಲಿದೆ. ಕನ್ನಡ ರಸಿಕರೆಲ್ಲರೂ ಗಮನಿಸಲೇಬೆಕಾದ ಗ್ರಂಥ ಇದು ಎಂದೂ ಧಾರಾಳವಾಗಿ ಹೇಳಬಹುದು.

ಹಾಗಂತ ಇಲ್ಲಿ ಹೇಳಿದ ಎಲ್ಲ ಸಂಗತಿಗಳನ್ನೂ ಎಲ್ಲರೂ ಒಪ್ಪುತ್ತಾರೆಂದಾಗಲೀ, ಒಪ್ಪಲೇಬೇಕೆಂದಾಗಲೀ ಅಲ್ಲ. ಮುಂದೆ ಚರ್ಚಿಸಿ ಒಂದು ಸಿದ್ಧಾಂತಕ್ಕೆ ಬರಬಹುದಾದ, ಹಾಗೆ ಬರಲು ತಕ್ಕ ಮೌಲಿಕ ಸಾಮಗ್ರಿ ಇಲ್ಲಿದೆ. ಅಂಥ ಕೆಲಸ ಸಾರೋದ್ಧಾರ ನಡೆಯಲಿ. ಆ ಮೂಲಕ ಈ ಕೃತಿ ಕೃತಿಕಾರ ಇಬ್ಬರೂ ಕೃತಾರ್ಥತೆ ಪಡೆಯಲಿ ಎಂದು ಹಾರಯಿಸಿ ಶುಭಾಶಯಗಳನ್ನು ಇಲ್ಲಿ ಸಲ್ಲಿಸುತ್ತೇನೆ.

                                                                                                                                      -ಗೋಪಾಲಕೃಷ್ಣ ಅಡಿಗ

Main Menu

ಸಮಗ್ರ ಬೇಂದ್ರೆ ವಿಮರ್ಶೆ

ಸಮಗ್ರ ಬೇಂದ್ರೆ ವಿಮರ್ಶೆ

₹1,250.00

Add to Cart