Description
ವ್ಯಕ್ತಿತ್ವ ಪ್ರತಿ ವ್ಯಕ್ತಿಯ ಆಧಾರ ಹಾಗೂ ಜೀವನವನ್ನು ರೂಪಿಸುವ ಸಾಧನ. ವ್ಯಕ್ತಿತ್ವ ಹುಟ್ಟಿನಿಂದ ಹಿಡಿದು ಬಾಲ್ಯ ಮತ್ತು ಪ್ರಾಯದವರೆಗೆ ಅರಳುತ್ತದೆ. ಮಧ್ಯ ಮತ್ತು ವೃದ್ಧಾಪ್ಯದಲ್ಲಿ ಅವರಿಗೇ ತಿಳಿಯದಂತೆ ವಿಕಾರ ಹೊಂದುತ್ತದೆ. ಈ ವ್ಯಕ್ತಿತ್ವ ವಿಕಾರವೇ ಮಾನಸಿಕ ತೊಂದರೆ, ಕಷ್ಟ, ಕ್ಷುಬ್ಧ, ನೆಮ್ಮದಿ ಇಲ್ಲದ ಆತಂಕದ ಜೀವನಕ್ಕೆ ಕಾರಣವಾಗಿದೆ. ಇದರಿಂದ ದೈಹಿಕ ಆರೋಗ್ಯಕ್ಕೂ ಧಕ್ಕೆಯಾಗುವ ಸಂಭವವಿದೆ. ವ್ಯಕ್ತಿತ್ವ ವಿಕಾರವನ್ನು ನಿವಾರಣೆಗೊಳಿಸುವುದೇ ವ್ಯಕ್ತಿತ್ವ ಸುಧಾರಣೆಯ ಉದ್ದೇಶ.
ಈ ಪುಸ್ತಕದಲ್ಲಿ ವ್ಯಕ್ತಿತ್ವ ವಿಕಾಸಕ್ಕೂ ಸುಧಾರಣೆಗೂ ಏನು ವ್ಯತ್ಯಾಸ? ಸುಧಾರಣೆಯ ಆದ್ಯತೆ ಯಾರಿಗೆ ಮತ್ತು ಏತಕ್ಕಾಗಿ? ಸುಧಾರಣೆಯ ವಿಧಾನ ಯಾವ ರೀತಿ? ಸುಧಾರಣೆಗೆ ಬರುವ ಅಡ್ಡಿಗಳೇನು? ಅವುಗಳ ನಿವಾರಣೆ ಹೇಗೆ? ಸುಧಾರಣೆಯನ್ನು ಸಾಧಿಸಲು ಬೇಕಾದ ತಿಳುವಳಿಕೆಗಳೇನು? ಈ ವಿಷಯಗಳನ್ನು ಪ್ರಾಸ್ತಾವಿಕವಾಗಿ ಪ್ರಸ್ತಾವಿಸಲಾಗಿದೆ. ಉಳಿದ ಅಧ್ಯಾಯಗಳಲ್ಲಿ ವ್ಯಕ್ತಿತ್ವ ಸುಧಾರಣೆಗೆ ಅವಶ್ಯವಾದ ಮತ್ತು ಬದುಕಿಗೆ ಸಂಬಂಧಪಟ್ಟ ಮೂಲ ವಿಷಯಗಳು ಹಾಗೂ ಅವುಗಳ ಬಗ್ಗೆ ಇರಬೇಕಾದ ತಿಳುವಳಿಕೆಗೆ ಮೀಸಲಾಗಿದೆ.
Specification
Additional information
book-no | 68 |
---|---|
isbn | 81-86595-38-4 |
author-name | |
published-date | 2006 |
language | Kannada |