Roll over image to zoom in
Description
ಮಂತ್ರಸಂತಾನ ಮತ್ತು ಮೂರು ನಾಟಕಗಳು
ಪ್ರಾಚೀನ ಸಾಹಿತ್ಯಕೃತಿಗಳ ಮರು-ನಿರೂಪಣೆಯೆಂಬುದು ಇಂದು ಭಾರತೀಯ ಸಾಂಸ್ಕೃತಿಕ ಪರಂಪರೆಗೆ ವಿರುದ್ಧವಾದ ರಾಜಕೀಯ ನೆಲೆಗಳಿಂದ ಹೊಸ ಹೊಸ ರೂಪಗಳಲ್ಲಿ ನಡೆಯುತ್ತ, ಸಮಾಜವನ್ನು ನೇತ್ಯಾತ್ಮಕವಾಗಿ ಪ್ರಭಾವಿಸಿತ್ತಿರುವುದರಿಂದ ಜನಸಾಮಾನ್ಯರ ಸಂದಿಗ್ಧತೆ ಗಾಢವಾಗುತ್ತ ಸಾಗುತ್ತಿರುವುದು ಅನುಭವವೇದ್ಯ. ಇಂಥ ಹೊತ್ತಿನಲ್ಲಿ, ಪ್ರಾಚೀನ ಸಾಹಿತ್ಯಗಳ ಮೂಲ ಆಶಯಗಳಿಗೆ ಧಕ್ಕೆಯಾಗದಂಥ, ಭಾರತೀಯ ಸಾಂಸ್ಕೃತಿಕ ಪರಂಪರೆಯ ಹರಿವನ್ನು ಗಾಸಿಗೊಳಿಸದಂಥ, ವರ್ತಮಾನದ ಸಾಹಿತ್ಯ ಕಲಾ-ಪ್ರಕಾರಗಳನ್ನು ಮುನ್ನೆಲೆಗೆ ತರಬೇಕಾದ, ತನ್ಮೂಲಕ ಗೊಂದಲಕ್ಕೊಳಗಾಗುತ್ತಿರುವ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಾದರಿಯಾಗಬಹುದಾದ ನಾಟಕಗಳ ಸಂಕಲನ – ’ಮಂತ್ರಸಂತಾನ ಮತ್ತು ಮೂರು ನಾಟಕಗಳು’.