Description
ನಮ್ಮ ಸ್ವಾತಂತ್ರ್ಯ ಹೋರಾಟವೆಂಬುದು ನೂರೋ ಇನ್ನೂರೋ ವರ್ಷಗಳ ಸಂಘರ್ಷವಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಡೆದುಹೋದ ಕ್ರಾಂತಿಯೂ ಅಲ್ಲ; ನಮ್ಮ ಸಂಸ್ಕೃತಿ-ಸಭ್ಯತೆಗಳ ಮೇಲೆ ಶತಶತಮಾನಗಳಿಂದ ನಿರಂತರ ನಡೆಯುತ್ತ ಬಂದಿರುವ ಪರಕೀಯರ ದಾಳಿ-ಆಕ್ರಮಣಗಳನ್ನು ದಿಟ್ಟವಾಗಿ ಎದುರಿಸಿ ನಿಂತ ಸುದೀರ್ಘ ಸಂಘರ್ಷ. ಇದು ಕೇವಲ ನಮ್ಮ ಭೌತಿಕ ಸಂಪತ್ತನ್ನು, ವ್ಯಾವಹಾರಿಕ ಗಡಿಗಳನ್ನು ರಕ್ಷಿಸಿಕೊಳ್ಳಲು ನಡೆದದ್ದಲ್ಲ; ಜೀವ-ಜಗತ್ತುಗಳನ್ನು ಕುರಿತ ಆತ್ಯಂತಿಕ ಸತ್ಯವನ್ನು, ಧರ್ಮವನ್ನು ಕಾಪಾಡಲು ನಡೆದದ್ದು. ಈ ನಿರಂತರ ಸಂಘರ್ಷವನ್ನು ವ್ಯಾವಹಾರಿಕ ಸಾಂಪತ್ತಿಕ ಕಾರಣಗಳನ್ನು ಮೀರಿದ ತಾತ್ತ್ವಿಕ ಸಂಗತಿಗಳು ಮುನ್ನಡೆಸಿವೆ. ನಮ್ಮದು ಮತವಿಸ್ತರಣೆಗಾಗಿ, ಗಡಿಯ ವಿಸ್ತರಣೆಗಾಗಿ, ಅಧಿಕಾರಸ್ಥಾಪನೆಗಾಗಿ, ಭೂಮಿ-ಸಂಪತ್ತುಗಳ ಒಡೆತನಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ; ಇದೆಲ್ಲವುಗಳಿಗಿಂತ ಮಿಗಿಲಾದ ’ಧರ್ಮ’ ರಕ್ಷಣೆಗಾಗಿ ನಡೆಸುತ್ತಿರುವ ಹೋರಾಟ.
ಈ ಸಂಗತಿಯನ್ನು ಮತ್ತೊಮ್ಮೆ ಮೆಲುಕು ಹಾಕಲು ಪೂರಕವಾಗಿ ಒದಗಿಬರುವ ಮಹತ್ತ್ವದ ಕೃತಿ ಇದು.