Description
ಹೊರನೊಟಕ್ಕೆ ಗಾಂಧಿ ಅನುಯಾಯಿಗಳಂತೆ ಕಂಡರೂ, ಅಂತರಂಗದಲ್ಲಿ ಕಮ್ಯುನಿಸ್ಟರೇ ಆಗಿದ್ದ ಸ್ವತಂತ್ರ ಭಾರತದ ಅಧಿಕಾರದ ಚುಕ್ಕಾಣಿ ಹಿಡಿದವರು ಅಧಿಕಾರದ ದಾಹದಿಂದ ಹಾಗೂ ಓಟುಗಳನ್ನು ಇಡಿಯಾಗಿ ಚಲಾಯಿಸುವ ಸಮುದಾಯವನ್ನು ತೃಪ್ತಿ ಪಡಿಸುವ ಸಲುವಾಗಿ ’ಸೆಕ್ಯುಲರ್’ ಎಂಬ ಯುರೋಪಿಯನ್ ಶಬ್ದವನ್ನು ಉಪಯೋಗಿಸಿದರು. ಹಲವಾರು ಸವಲತ್ತುಗಳನ್ನು ನೀಡಲು ದೇಶದ ಸಾಂವಿಧಾನಿಕವಾಗಿ ಒಪ್ಪಿಕೊಂಡು, ಹೊಸ ಪಂಥಗಳನ್ನು ಸೃಷ್ಟಿಸುವುದು ಮತ್ತು ವಿಸ್ತರಿಸುವುದಕ್ಕೆ ಮುಸ್ಲಿಂ ಮತ್ತು ಕ್ರೈಸ್ತರಿಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡಲಾಯಿತು. ರಾಷ್ಟ್ರೀಯತೆಗೆ ಆತ್ಮಘಾತುಕವಾದ ಈ ವಿಕೃತಿಯ ವಿರುದ್ಧ ಹೋರಾಟಕ್ಕಿಳಿದವರನ್ನು ಆಳುವ ಪಕ್ಷವು ಕೋಮುವಾದಿಗಳು ಮತ್ತು ರಾಷ್ಟ್ರದ ಏಕತೆಯ ಶತ್ರುಗಳು ಎನ್ನುವ ಫತ್ವಾವನ್ನೇ ಹೊರಡಿಸಿ ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ತನ್ಮೂಲಕ ಬಹುಸಂಖ್ಯಾತ ಹಿಂದೂ ಸಮುದಾಯವನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನಡೆಸಿಕೊಳ್ಳಲಾಯಿತು. ಜೊತೆಜೊತೆಗೆ ಸೆಕ್ಯುಲರಿಸಂನ ಹೆಸರಿನಲ್ಲಿ ಅರಾಷ್ಟ್ರೀಕರಣಗೊಳಿಸುವ ವ್ಯವಸ್ಥಿತ ಸಂಚು ನಡೆಯಿತು.
ಈ ಸಂಚಿನ ಭಾಗವಾಗಿ ನಡೆದ ಧರ್ಮ ಹಾಗೂ ಸೆಕ್ಯುಲರಿಸಂನ ಅರ್ಥವನ್ನು ವಿಕೃತ ವ್ಯಾಖ್ಯಾನ, ಇಸ್ಲಾಂನ ಸವಾಲು ಹಾಗೂ ಹಿಂದೂ ಪ್ರತಿಕ್ರಿಯೆಗಳು – ಮುಂತಾದವುಗಳ ಕುರಿತು ಬೆಳಕು ಚೆಲ್ಲುವ ಅಧ್ಯಯನಶೀಲ ಬರಹ ಈ ಪುಸ್ತಕದಲ್ಲಿದೆ.
Specification
Additional information
book-no | 89 |
---|---|
isbn | 81-86595-54-6 |
moola | ಸೀತಾರಾಮ ಗೋಯಲ್ |
author-name | |
published-date | 2012 |
language | Kannada |