Description
ಇಪ್ಪತ್ತನೇ ಶತಮಾನದ ಮಧ್ಯಭಾಗದ ಭಾರತದ ಅಗ್ರಗಣ್ಯ ಧಾರ್ಮಿಕ ಮುಖಂಡರಲ್ಲೊಬ್ಬರು ’ಮಹಾಭಾಗವತ’ರೆಂದೇ ಪ್ರಸಿದ್ಧರೂ ಕೊಲ್ಲಾಪುರದ ಶ್ರೀ ಕರವೀರ ಪೀಠದ ಅಧ್ಯಕ್ಷರೂ ಅಗಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯ ಡಾ|| ಕುರ್ತಕೋಟಿ (೧೮೭೯-೧೯೬೭) ಅವರು. ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರ ಅನುಗ್ರಹಕ್ಕೆ ಪಾತ್ರರಾಗಿದ್ದ ಮಹಾಭಾಗವತರು; ಪ್ರಕಾಂಡ ವಿದ್ವಾಂಸರಾಗಿದ್ದುದಲ್ಲದೆ ಸಮಾಜ ಸುಧಾರಣೆ ಗಾಗಿಯೂ ಮತಾಂತರಗೊಂಡಿರುವವರ ಪುನರಾವರ್ತನಕ್ಕಾಗಿಯೂ ಕಂಕಣಬದ್ಧರಾದವರು ಅವರು.
ಜೊತೆಜೊತೆಗೇ ಶಾಸ್ತ್ರಾಧ್ಯಯನದ ಉಜ್ಜೀವನಕ್ಕಾಗಿಯೂ ಸಂಸತ ಭಾಷಾ ಪ್ರಸಾರಕ್ಕಾಗಿಯೂ ಹಾಗೂ ರಾಷ್ಟ್ರೀಯ ದೃಷ್ಟಿಯ ವಿವಿಧಮುಖ ಕಾರ್ಯಗಳ ಪ್ರವರ್ತನೆಗಾಯೂ ಮಹಾಭಾಗವತರು ಮಾಡಿದ ಪರಿಶ್ರಮ ಇತಿಹಾಸಾರ್ಹವಾದದ್ದು. ಅವರು ಕರ್ನಾಟಕ ಮೂಲದವರೆಂಬುದು (ಗದಗ) ಕನ್ನಡಿಗರಿಗೆ ಅಭಿಮಾನಾಸ್ಪದ ಸಂಗತಿ. ಇಂಥ ಅಗಾಧ ದೇಶವ್ಯಾಪಿ ಕಾರ್ಯ ಮಾಡಿದ ಸುಧಾರಕ ಸಂತ ಶ್ರೇಷ್ಠರ ಜೀವಿತ ಕಾರ್ಯ ಈ ಪೀಳಿಗೆಯವರಿಗೆ ಬಹುಮಟ್ಟಿಗೆ ಅಪರಿಚಿತವೇ ಆಗಿದೆ. ಈ ಕೊರತೆಯನ್ನು ನೀಗಿಸಿ ಅತ್ಯಂತ ಶ್ರಮಪೂರ್ವಕವಾಗಿ ಮಾಹಿತಿ ಸಂಗ್ರಹಿಸಿ, ಮಹಾಭಾಗವತರ ಪ್ರೇರಣಾದಾಯಕ ಜೀವನದ ಚಿತ್ರವನ್ನು ಈ ಕೃತಿಯಲ್ಲಿ ನೀಡಲಾಗಿದೆ.
Specification
Additional information
book-no | 80 |
---|---|
isbn | 81-86595-48-1 |
author-name | |
published-date | 2010 |
language | Kannada |