ಲಕ್ಷಾಧಿಪತಿಯ ಗುಣಲಕ್ಷಣಗಳು

₹225.00

Out of stock

ರಂಗಸ್ವಾಮಿ ಮೂಕನಹಳ್ಳಿ

ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ

ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.

ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622

₹225.00

Description

ಅಸಾಮಾನ್ಯರು ಎನ್ನಿನಿಕೊಳ್ಳುವುದಕ್ಕೆ ಮುಂಚೆ ಎಲ್ಲರೂ ಸಾಮಾನ್ಯರೇ! ಹೌದಲ್ವಾ? ನೀವೇ ಯೋಚಿಸಿ ನೋಡಿ. ಅವರಿಗೂ ಅಡೆತಡೆಗಳು ಎಲ್ಲರಿಗೂ ಬಂದಂತೆ ಬಂದಿರುತ್ತವೆ. ಅವರು ಅಡೆತಡೆಗಳ ಬಗ್ಗೆ ಗೊಣಗುತ್ತ ಕೂರುವ ಬದಲು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಿರುತ್ತಾರೆ. ಈ ಧೀಮಂತ ಗುಣವೇ ಅವರನ್ನು ಗುಂಪಿನಿಂದ ಬೇರ್ಪಡಿಸುತ್ತದೆ. ವಿಶೇಷರನ್ನಾಗಿಸುತ್ತದೆ. ಲಕ್ಷಾಧಿಪತಿಯ ಗುಣಲಕ್ಷಣಗಳನ್ನು ನಾವು ಅಳವಡಿಸಿಕೊಳ್ಳಬಹುದೇ? ಅಥವಾ ಅವು ಅನುವಂಶಿಕವಾಗಿ ಬರುವಂತಹ ಗುಣಗಳೇ? ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಕೆಲವೊಂದು ಹುಟ್ಟಿನಿಂದ ಬಂದಿರುತ್ತದೆ ಎನ್ನುವುದು ನಿಜವಾದರೂ, ಬಹುತೇಕ ಗುಣಗಳನ್ನು ಕಲಿಕೆಯಿಂದ, ಸ್ವ–ಪ್ರಯತ್ನದಿಂದ ಅಳವಡಿಸಿಕೊಳ್ಳಬಹುದು. ಜಗತ್ತಿನ ಮುಕ್ಕಾಲು ಪಾಲು ಶ್ರೀಮಂತರು ಸೆಲ್ಫ್ ಮೇಡ್. ಅವರಿಗೂ ಯಾವ ಗಾಡ್~ಫಾದರ್ ಇರಲಿಲ್ಲ ಎನ್ನುವುದು ಗೊತ್ತಿರಲಿ.

ನಿಮಗೆಲ್ಲಾ ಒಂದು ಅಚ್ಚರಿಯ ವಿಷಯವನ್ನು ಹೇಳುವೆ. ಅಚಾನಕ್ಕಾಗಿ ಅಂದರೆ ಲಾಟರಿ ಮೂಲಕ ಹಣ ಗಳಿಸಿದವರಲ್ಲಿ 70ಕ್ಕೂ ಹೆಚ್ಚು ಪ್ರತಿಶತ ಜನ ಒಂದೆರಡು ವರ್ಷಗಳಲ್ಲಿ ದಿವಾಳಿ ಎದ್ದು ಹೋಗುತ್ತಾರೆ ಎನ್ನುತ್ತದೆ ಸಂಶೋಧನೆ. ಅಮೆರಿಕನ್ ಬ್ಯಾಂಕ್ರುಪ್ಟ್ಸಿ ಇನ್ಸ್ಟಿಟ್ಯೂಟ್ ನಡೆಸಿದ ಸಂಶೋಧನೆಯಲ್ಲಿ ಲಾಟರಿ ಗೆದ್ದವರಲ್ಲಿ ಮೆಜಾರಿಟಿ 2ರಿಂದ 5 ವರ್ಷಗಳಲ್ಲಿ ದಿವಾಳಿ ಘೋಷಿಸಿಕೊಳ್ಳುತ್ತಾರೆ ಎನ್ನುವುದು ತಿಳಿದು ಬಂದಿದೆ. ಇದರರ್ಥ ಸುಲಭವಾಗಿ ಬಂದದ್ದು ಸುಲಭವಾಗಿ ಹೋಗುತ್ತದೆ. ನಮಗ್ಯಾವುದೂ ಪುಕ್ಕಟೆ ಬೇಡ. ಸುಲಭವಾಗುವುದೂ ಬೇಡ. ಕ್ಷಮತೆ ಹೆಚ್ಚಿಸಿಕೊಳ್ಳೋಣ. ಇಲ್ಲಿನ ಗುಣಗಳನ್ನು ಅಳವಡಿಸಿಕೊಳ್ಳೋಣ. ಅವು ನಿಜಕ್ಕೂ ನಮ್ಮೊಂದಿಗೆ ಕೊನೆಯವರೆಗೂ ಬರುತ್ತವೆ.

ರಂಗಸ್ವಾಮಿ ಮೂಕನಹಳ್ಳಿ

Main Menu

ಲಕ್ಷಾಧಿಪತಿಯ ಗುಣಲಕ್ಷಣಗಳು

ಲಕ್ಷಾಧಿಪತಿಯ ಗುಣಲಕ್ಷಣಗಳು

₹225.00