Description
ಸರಿಯಾಗಿ ದಾಖಲಾಗಬೇಕಾದ
ಭಾರತದ ನಿಜ-ಇತಿಹಾಸ
ಕಳೆದ ಒಂದು ಶತಮಾನದಿಂದ ವಿಕೃತಗೊಳಿಸಲ್ಪಟ್ಟಿರುವ ನಮ್ಮ ಪಠ್ಯಪುಸ್ತಕಗಳು ವಿಷ-ಕಾರುತ್ತವೆ. ಅವು ತಿಳಿಸುವಂತೆ, ಹಿಂದೂ ಧರ್ಮ ಹಿಂದೂ ಸಮಾಜಗಳೆಂದರೆ, ಕೇವಲ ಸತಿ ಸಹಗಮನ-ಅಸ್ಪೃಶ್ಯತೆ-ಅಸಮಾನತೆ-ಒಂದು ಸಮುದಾಯಕ್ಕೆ ಮಾತ್ರ ಶಿಕ್ಷಣ-ಮೂಢ ನಂಬಿಕೆಗಳು-ಜಾತೀಯತೆ ಇಷ್ಟೇನೇ! ತಲೆ ತಗ್ಗಿಸುವಂತಹ ಇಂತಹ ಸಂಗತಿಗಳು ಮಾತ್ರವೇ ನಮ್ಮ ಪರಂಪರೆಯನ್ನು ಪ್ರತಿನಿಧಿಸುತ್ತವೆಯೇ? ಹಾಗಿದ್ದರೆ ಸತ್ಯ ಏನು? ಸಾಂದರ್ಭಿಕ ಸಾಕ್ಷ್ಯಾಧಾರಗಳು, ಇಸ್ಲ್ಮಾಮೀ ಆಸ್ಥಾನ ಇತಿಹಾಸಕಾರರ ದಾಖಲೆಗಳು, ಲಭ್ಯಶಿಲಾ ಶಾಸನಗಳು ಯಾವೆಲ್ಲ ಪುರಾವೆಗಳನ್ನು ಒದಗಿಸುತ್ತವೆಯೋ, ಅವು ನಮ್ಮ ಇತಿಹಾಸ-ಪಠ್ಯದ ಆಧಾರವಾಗಬೇಕಲ್ಲವೇ? ಹಿಂದೂ ಸಮಾಜ ಇದ್ದರೆ ಮಾತ್ರ ನಮ್ಮ ಬೇಲೂರು, ಹಳೇಬೀಡು, ಗೊಮ್ಮಟೇಶ್ವರ, ಅಜಂತಾ ಎಲ್ಲೋರಾ, ನಮ್ಮ ಸಂಗೀತ, ನಮ್ಮ ಚಿತ್ರಕಲೆ, ನಮ್ಮ ನಾಟಕ, ನಮ್ಮ ಯಕ್ಷಗಾನ, ನಮ್ಮ ಅತ್ಯದ್ಭುತವಾದ ಸಾಹಿತ್ಯ ಸಂಪತ್ತು ಎಲ್ಲವೂ ಉಳಿಯಲು ಸಾಧ್ಯ. ಅಲ್ಲವೇ? ನಮ್ಮದು ನಿಜವಾಗಿಯೂ ಸೋತ ಸಮಾಜವೇ? ಪರಾಜಿತ ದೇಶವೇ? ಮೋಸದಿಂದ ನಮ್ಮನ್ನು ಆಳಿದ ಸಾಮ್ರಾಜ್ಯಶಾಹಿ-ವಸಾಹತುಶಾಹಿ ಆಕ್ರಮಣಕಾರಿಗಳು ಸ್ವತಃ ಬರೆದಿಟ್ಟ ವಿಕೃತ-ಇತಿಹಾಸವು ಸತ್ಯದ ಬೆಳಕಿನಲ್ಲಿ ಪುನಾರಚನೆಯಾಗಬೇಕಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಈಗಲಾದರೂ ಮೈಕೊಡವಿಕೊಂಡು ಎದ್ದು, ಇನ್ನಾದರೂ ಉತ್ತರಗಳನ್ನು ಕಂಡುಕೊಳ್ಳೋಣ. ನಿಜ-ಇತಿಹಾಸದ ಸು-ಸ್ಥಾಪನೆಗಾಗಿ ಶ್ರಮಿಸೋಣ. ಗ್ರಹಣ ಸರಿಯಲಿ, ಅಂಧಕಾರದ ಆವರಣ ತೊಲಗಲಿ.
ಮಂಜುನಾಥ ಅಜ್ಜಂಪುರ