Roll over image to zoom in
Description
ಆರ್ಯುವೇದದಲ್ಲಿ ಚಿಕಿತ್ಸೆಯನ್ನು ಶೋಧನ ಮತ್ತು ಶಮನವೆಂದು ಎರಡು ಬಗೆಯಾಗಿ ವಿಂಗಡಿಸಬಹುದು. ಯಾವುದೇ ರೋಗವು ಶಾರೀರಿಕ ಮತ್ತು ಮಾನಸಿಕ ಎಂದು ಎರಡು ವಿಧದಲ್ಲಿದ್ದು, ಇವು ಒಂದನ್ನೊಂದು ಸೇರಿರುತ್ತವೆ. ಆದುದರಿಂದ ಎರಡರ ಚಿಕಿತ್ಸೆಯೂ ಮುಖ್ಯ. ಹೀಗಾಗಿ ಶರೀರದ ದುಷ್ಟ ದೋಷಗಳನ್ನು ಹೊರಹಾಕುವುದಕ್ಕೆ ಪಂಚಕರ್ಮದ ವಿಜ್ಞಾನವು ಅತ್ಯಾವಶ್ಯಕ.
ಪಂಚಕರ್ಮವನ್ನು ರೋಗಿಗಳು ಮಾತ್ರವಲ್ಲ; ಆರೋಗ್ಯವಂತರೂ ಸಹ ಉಪಯೋಗಿಸುವುದರಿಂದ ಆಹಾರ, ವಾಯುಗುಣ ಹಾಗೂ ಋತುಮಾನಗಳಿಂದಾಗುವ ದೋಷಚಯ-ಪ್ರಕೋಪಗಳನ್ನು ಹೋಗಲಾಡಿಸಬಹುದು. ಹೀಗೆ ರೋಗಬಾರದಂತೆ ಪ್ರತಿಬಂಧಿಸುವುದಕ್ಕೂ ಇದರಿಂದ ಪ್ರಯೋಜನವಾಗುತ್ತದೆ.
ಈ ಪಂಚಕರ್ಮ ಚಿಕಿತ್ಸೆಯ ಕುರಿತು, ಆಯುರ್ವೇದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ, ವೈದ್ಯರಿಗೆ ಆಧಾರ ಗ್ರಂಥವಾಗಿ ಹಾಗೂ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳ ಬಯಸುವವರಿಗೆ ಅನುಕೂಲವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ.
Specification
Additional information
book-no | 76 |
---|---|
isbn | 81-86595-45-7 |
author-name | |
published-date | 1978 |
language | Kannada |