Roll over image to zoom in
Description
ಭಾರತದಲ್ಲಿ ೧೯-೨೦ನೇ ಶತಮಾನಗಳಲ್ಲಿ ನಡೆದ ಸ್ವಾತಂತ್ರ್ಯಸಂಘರ್ಷ ಜಗತ್ತಿನ ಇತಿಹಾಸದಲ್ಲಿಯೇ ಅಪೂರ್ವವಾದುದ್ದು ಮತ್ತು ರೋಮಾಂಚಕಾರಿಯಾದುದ್ದು. ಒಂದು ಕಡೆ ವಿಶುದ್ಧ ರಾಷ್ಟ್ರದರ್ಶನ ಬೋಧೆಯ ಮೂಲಕ ಸ್ವಾತಂತ್ರ್ಯಾಭಿಮುಖವಾಗಿ ಜನಮಾನಸದ ನಿರ್ಮಾಣ, ಇನ್ನೊಂದು ಕಡೆ ನೇರವಾಗಿ ವಿದೇಶೀ ಪ್ರಭುತ್ವಕ್ಕೆ ಸವಾಲೆಸೆದ ಸಶಸ್ತ್ರ ಹೋರಾಟ, ಮತ್ತೊಂದು ಕಡೆ ಗಲ್ಲುಕಂಬಕ್ಕೂ ಬ್ರಿಟಿಷರ ಪಾಶವೀಶಕ್ತಿಗೂ ಎದೆಯೊಡ್ಡಿದ ಕ್ರಾಂತಿಕಾರಿಗಳ ಬಲಿದಾನದ ದೀರ್ಘಸರಣಿ, ಅಂತಿಮ ಹಂತದಲ್ಲಿ ಸ್ವತಂತ್ರ ಬೃಹತ್ ಸೇನೆಯನ್ನು ಸಜ್ಜುಗೊಳಿಸಿ ಆಂಗ್ಲ ಸರ್ಕಾರದ ಮುಖ್ಯ ಅವಲಂಬವಾಗಿದ್ದ ಸೇನಾಶಕ್ತಿಯನ್ನು ನಿರರ್ಥಕಗೊಳಿಸಿ ಸ್ವಾತಂತ್ರ್ಯಪ್ರಾಪ್ತಿಯನ್ನು ತೀವ್ರಗೊಳಿಸಿದು ; – ಇಂತಹ ವಿವಿಧಮುಖ ಅಭಿಯಾನಗಳ ಫಲವಾಗಿ ೧೯೪೭ರಲ್ಲಿ ಭಾರತ ದಾಸ್ಯಮುಕ್ತಗೊಂಡಿತು. ಈಗಿನ ಪೀಳಿಗೆಗೆ ಪ್ರೇರಣಾದಾಯಿಯಾಗಿರುವ ಈ ಇತಿಹಾಸದ ಹಲವು ಮುಖಗಳ ಚಿತ್ರಣವನ್ನು ಈ ಪುಸ್ತಕದಲ್ಲಿ ಕಾಣಬಹುದು.
Specification
Additional information
book-no | 71 |
---|---|
isbn | 81-86595-41-4 |
author-name | |
published-date | 2007 |
language | Kannada |