Description
ಈ ಪುಸ್ತಕದ ಶೀರ್ಷಿಕೆಯಲ್ಲಿ ’ಋಷಿವಾಕ್ಯ’ ಎಂಬ ಪದದಲ್ಲಿ ಋಷಿ ಎಂದು ಪರಿಗಣಿಸಲ್ಪಟ್ಟಿರುವವರು ದಿ. ಡಾ|| ಡಿ.ವಿ. ಗುಂಡಪ್ಪನವರು; ಋಷಿವಾಕ್ಯ ಎಂದರೆ ಋಷಿವರ್ಯರು ರಚಿಸಿರುವ ಮಹಾ ದಿವ್ಯಗ್ರಂಥ ’ಮಂಕುತಿಮ್ಮನ ಕಗ್ಗ’ದಿಂದ ಆರಿಸಿಕೊಂಡಿರುವ ಅಣಿಮುತ್ತುಗಳು. ಪ್ರಾಸ್ತಾವಿಕ ವಿವರವುಳ್ಳ ಮೊದಲನೆಯ ಮತ್ತು ಎರಡನೇ ಅಧ್ಯಾಯಗಳಲ್ಲಿ ’ಋಷಿವರ್ಯರ ಬಗ್ಗೆ ಮತ್ತು ಋಷಿವಾಕ್ಯಗಳ ಮೂಲಗ್ರಂಥದ ಬಗ್ಗೆ ಸಂಕ್ಷೇಪವಾಗಿ ಕೆಲವು ವಿವರಗಳನ್ನು ಕೊಡಲಾಗಿದೆ. ನಂತರದ ಹತ್ತೊಂಬತ್ತು ಅಧ್ಯಾಯಗಳು ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ವಿವಿಧ ವಿಚಾರಗಳು. ಇವುಗಳಲ್ಲಿ ಕೆಲವು ವಿಚಾರಗಳ ಶೀರ್ಷಿಕೆಗಳು ಅವರ ಹಿಂದಿನ ಪುಸ್ತಕದಿಂದ ಬಂದಿರುವ ಹಾಗೇ ಇದ್ದರೂ ಸಹ ಅವುಗಳಲ್ಲಿ ಪ್ರತಿಪಾದಿಸಿರುವ ಅಂಶಗಳೆಲ್ಲಾ ಮಿಕ್ಕ ಹೊಸ ಅಧ್ಯಾಯಗಳಲ್ಲಿರುವಂತೆಯೇ ಹೊಸದಾಗಿವೆ.
ವಿಷಯಸೂಚಿಯನ್ನು ಅವಲೋಕಿಸಿದರೆ, ಇಲ್ಲಿ ಕಂಡುಬರುವ ವಿಚಾರಗಳೆಲ್ಲ ಸಾಮಾನ್ಯವಾಗಿ ಸಾಮಾನ್ಯ ರೆಲ್ಲರೂ ಸರಿಯಾದ ರೀತಿಯಲ್ಲೇ ತಿಳಿದಿದ್ದೇವೆ ಎಂದುಕೊಂಡಿರುವ ಸಾಮಾನ್ಯ ವಿಷಯಗಳೇ, ಎಂಬುದು. ಆದರೆ ಪುಸ್ತಕದಲ್ಲಿ ಪ್ರತಿಪಾದಿಸಿರುವ ಅಂಶಗಳು ಮಾತ್ರ ಸಾಮಾನ್ಯ ತಿಳಿವಳಿಕೆಗಿಂತ ಬೇರೆಯೇ ಆಗಿವೆ. ಲೇಖಕರು ತಮ್ಮ ಅನುಭವದ ಆಧಾರದಿಂದ ಹಲವಾರು ಕಮ್ಮಟಗಳಲ್ಲಿ ಈ ವಿಷಯದ ಕುರಿತು ನಡೆಸಿರುವ ಚರ್ಚೆ; ಸಾಮಾನ್ಯ ತಿಳಿವಳಿಕೆಗೆ ಭಿನ್ನವಾಗಿರುವ ಈ ಅಂಶಗಳೇ ಮಾನಸಿಕ ಆರೋಗ್ಯ ವರ್ಧನೆಗೆ ಪ್ರೇರಕ, ಕಾರಕ, ಶಕ್ತಿ ಹಾಗೂ ಸಾಮಗ್ರಿ. ಪ್ರತಿ ಅಧ್ಯಾಯದಲ್ಲೂ ಕ್ರೋಡೀಕರಿಸಿರುವ ಅಂಶಗಳನ್ನು ದೃಢೀಕರಿಸಲು ಅವುಗಳಿಗೆ ಉಪಯುಕ್ತವಾದ ಋಷಿವಾಣಿಯನ್ನು ಅಳವಡಿಸಿಕೊಳ್ಳಲಾಗಿದೆ.
Specification
Additional information
book-no | 72 |
---|---|
isbn | 81-86595-39-2 |
author-name | |
published-date | 2007 |
language | Kannada |