Description
ಪ್ರೊ. ಮಳೂರು ರಂಗಾಚಾರ್ಯರು (೧೮೬೧-೧೯೧೬) ನಮ್ಮ ನಾಡಿನ ಹೆಮ್ಮೆಯ ಪುತ್ರರಲ್ಲೊಬ್ಬರು. ಆಧುನಿಕ ಭಾರತದ ಪುನರುತ್ಥಾನ ಪರ್ವದ ಕಾಲದಲ್ಲಿ ಜೀವಿಸಿದ ಅವರು ಪೂರ್ವ–ಪಶ್ಚಿಮಗಳ, ಹಳತು–ಹೊಸತುಗಳ ಅವಿಕಲ ಸಮನ್ವಯವನ್ನು ಸಾಧಿಸಿದರು. ಹುಟ್ಟಿನಿಂದ ಬಡವರಾಗಿ, ಸ್ವಪರಿಶ್ರಮದಿಂದ ವಿಜ್ಞಾನದ ಹಲವು ಶಾಖೆಗಳಲ್ಲಿ ಮಾತ್ರವಲ್ಲದೆ ಸಾಹಿತ್ಯ, ಹಸ್ತಪ್ರತಿಶಾಸ್ತ್ರ, ಭಾಷಾಶಾಸ್ತ್ರ, ಇತಿಹಾಸ, ಮತ–ಧರ್ಮ, ದರ್ಶನಶಾಸ್ತ್ರ ಮೊದಲಾದ ವಿದ್ಯಾಶಾಖೆಗಳಲ್ಲಿ ಪ್ರಮಾಣಭೂತವಾದ ಪಾಂಡಿತ್ಯವನ್ನು ಸಂಪಾದಿಸಿ ಸರಳ, ಶುದ್ಧ, ಉಪಶಾಂತ ಜೀವನವನ್ನು ನಡೆಸಿ ಸಮಾಜಕ್ಕೆ ಮಾದರಿಯಾದ ಮಹನೀಯರವರು. ತಮಗಾಗಿ ಏನನ್ನೂ ಗಳಿಸದೆ ತಮ್ಮ ಶಕ್ತಿಸರ್ವಸ್ವವನ್ನೂ ಸಮಾಜಕ್ಕೆ ಧಾರೆಯೆರೆದ ಎಂ ರಂಗಾಚಾರ್ಯರು ಸ್ವಾಮಿ ವಿವೇಕಾನಂದರೇ ಮೆಚ್ಚಿಕೊಂಡ ಮಹನೀಯರು. ಇವರ ಸ್ಪೂರ್ತಿಪ್ರದ ಜೀವನ–ಸಾಧನೆಗಳನ್ನು ಅಡಕವಾಗಿ ಪರಿಚಯಿಸಿಕೊಡುವ ಉದ್ದೇಶದಿಂದ ಈ ಕಿರುಹೊತ್ತಿಗೆ ರೂಪುಗೊಂಡಿದೆ.





