Roll over image to zoom in
Description
ಮುಸ್ಲಿಂ ಕೋಮುವಾದವು ಭಾರತದ ಮುಸ್ಲಿಂ ಮಾನಸಿಕತೆಯನ್ನು ರೂಪಿಸಿದ ವಿಧಾನ ಮತ್ತು ಅದರ ಐತಿಹಾಸಿಕ ಹಿನ್ನೆಲೆಯ ಕುರಿತು ಸಂತುಲಿತ ಹಾಗೂ ದಾಖಲೆ ಸಹಿತವಾಗಿ ಹಮೀದ್ ದಲವಾಯಿ ಅವರು ಈ ಪುಸ್ತಕದಲ್ಲಿ ನಮ್ಮ ಮುಂದಿಟ್ಟಿದ್ದಾರೆ.
ಮುಸ್ಲಿಂ ಕೋಮುವಾದದ ಮೂಲ ಮತ್ತು ಅದರ ಸ್ವರೂಪ, ಭಾರತೀಯ ಮುಸಲ್ಮಾನರಲ್ಲಿರುವ ಸ್ವಘೋಷಿತರು, ಕಮ್ಯುನಿಸ್ಟರು ಪಾತ್ರ, ಬಂಗ್ಲಾ ಉದಯದ ಪರಿಣಾಮ, ಭಾರತದೊಂದಿಗೆ ಸಮನ್ವಯಗೊಳ್ಳುವಲ್ಲಿ ಮುಸ್ಲಿಮನಿಗಿರುವ ಅಡ್ಡಿ, ಭಾವೈಕ್ಯತೆ ಸಾಧ್ಯವೇ? ಮುಂತಾದ ವಿಷಯಗಳ ಕುರಿತು ಅವರು ಇಲ್ಲಿ ಚರ್ಚಿಸಿದ್ದಾರೆ.
ಓರ್ವ ರಾಷ್ಟ್ರವಾದಿ ಚಿಂತಕರಾಗಿದ್ದ ಹಮೀದ್ ದಲವಾಯಿ (1932-1977) ಅವರು ಭಾರತೀಯ ಮುಸಲ್ಮಾನರು ಪ್ರಜಾಸತ್ತಾತ್ಮಕ ಮನೋಭಾವದವರಾಗಿ ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಸಮರಸವಾಗಬೇಕೆಂಬ ವಿಚಾರದ ಪ್ರಬಲ ಪ್ರತಿಪಾದಕರಾಗಿದ್ದರು.
Specification
Additional information
book-no | 111 |
---|---|
author-name | |
language | Kannada |