Description
ಅತ್ಯುನ್ನತವೂ ದುರ್ಗಮವೂ ಆದ ಧ್ಯೇಯದ ಸಾಧನೆಯನ್ನು ಸಹಜ ಸಾಧ್ಯಗೊಳಿಸುವುದು ಸಂವಾದದ ಮಧುರ ಮಾಧ್ಯಮ. ಸಂವಾದವು ಅನ್ಯರೊಡನೆ ನಡೆಯಬೇಕು; ಪ್ರತಿವ್ಯಕ್ತಿಯ ಅಂತರಂಗದಲ್ಲಿಯೂ ನಡೆಯಬೇಕು. ಬಾಹ್ಯದಲ್ಲಿ ಸಜ್ಜನ-ಸಂಗ; ಆಂತರ್ಯದಲ್ಲಿ ಸದ್ವಿಚಾರ-ಸಂಗ; – ಇದು ಶ್ರೇಷ್ಠ ಸಂವಾದ. ದುಃಖ-ದುಗುಡಗಳನ್ನು ನಿವಾರಿಸಿ ಮನಸ್ಸನ್ನು ತಿಳಿಗೊಳಿಸಬಲ್ಲದ್ದು ಸಂವಾದ. ಸಂಶಯ ನಿವಾರಣೆ, ಅಹಂಕಾರ ನಿಯಮನ, ಜೀವಿಗಳ ನಡುವೆ ಸೌಹಾರ್ದ, ದೃಷ್ಟಿವೈಶಾಲ್ಯ, ಪರಸ್ಪರ ಬಲವರ್ಧನೆ- ಹೀಗೆ ಸಂವಾದದ ಸತ್ಫಲಗಳು ಅನೇಕ. ಸಂವಾದದ ಅಭ್ಯಾಸವು ಸ್ವಭಾವವಾದಂತೆಲ್ಲ ಜೀವನ-ಸೌಂದರ್ಯ ಅಧಿಕಗೊಳ್ಳುತ್ತದೆ; ಭಗವತ್-ಸಾನ್ನಿಧ್ಯ ಸಮೀಪಗತವಾಗುತ್ತದೆ. ಹೀಗೆ ಸಂಸ್ಕಾರಕಾರಿಯೂ ಜೀವೋನ್ನತಿಕಾರಕವೂ ಆಗಬಲ್ಲದ್ದು ಸಂವಾದ. ಸು-ಸಂವಾದದಲ್ಲಿ ಅಭಿರುಚಿಯನ್ನು ಬೆಳೆಸಿಕೊಳುವುದು ತೀರ್ಥಯಾತ್ರೆಯಂತೆ ಉಲ್ಲಾಸದಾಯಕ. ಸಂವಾದವು ಆತ್ಮದರ್ಶನದ ರಾಜಮಾರ್ಗ. ಸಂವಾದವು ಹೇಗೆ ಕ್ರಿಯಾಶೀಲತೆ, ಮನಃಸ್ಥೈರ್ಯ. ಮೃದುವರ್ತನೆ, ದಕ್ಷತೆ, ನಿರ್ಭೀತಿ, ತತ್ತ್ವನಿಷ್ಠೆ, ಚಿಂತನ ಸೌಷ್ಠವ, ಪ್ರೇಮಳತೆ ಮೊದಲಾದ ಸದ್ಗುಣಗಳನ್ನು ಸಮೃದ್ಧಗೊಳಿಸುತ್ತದೆ ಎಂಬುದರ ಸರಸಕಥನ ಈ ಪ್ರಬಂಧಸಂಗ್ರಹ.
Specification
Additional information
book-no | 109 |
---|---|
isbn | ISBN : 85-7531-055-3 |
moola | ಪ್ರ.ಗ. ಸಹಸ್ರಬುದ್ಧೆ |
author-name | |
published-date | 2010 |
language | Kannada |