Description
ಪ್ರಾಚೀನ ಭಾರತದ ರಸಾಯನ ವಿಜ್ಞಾನದ ಮುನ್ನಡೆ ಭಾರತೀಯರಿಗೆ ಹೆಮ್ಮೆತರುವ ವಿಷಯವಾಗಿದೆ. ಗಂಧಕ, ಪಾದರಸ ಮೊದಲಾದವನ್ನು- ಕೆಲವೊಮ್ಮೆ ಸಸ್ಯಸಂಯೋಗದಿಂದ – ಸಂಕೀರ್ಣ ಪ್ರಕ್ರಿಯೆಗೊಳಪಡಿಸಿ ವೈದ್ಯಶಾಸ್ತ್ರದಲ್ಲಿ ಬಳಸಲಾಗಿದೆ. ಈ ರಸವಿದ್ಯಾ ಪ್ರಕ್ರಿಯೆಗೆ 1500 ವರ್ಷಗಳಿಗಿಂತ ದೀರ್ಘವಾದ ಪರಂಪರೆಯಿದೆ. ಭಾರತದ ಲೋಹಕುಶಲಕರ್ಮಿಗಳು ಕಬ್ಬಿಣ ಮಾತ್ರವಲ್ಲದೆ ಉಕ್ಕು ಮೊದಲಾದ ಮಿಶ್ರಲೋಹಗಳ ತಯಾರಿಕೆಯಲ್ಲಿ ಅತಿಶಯ ಪರಿಣತಿ ಸಾಧಿಸಿದ್ದರು. ತಾಮ್ರ ಮತ್ತು ತವರದ ಮಿಶ್ರಣವಾದ ಕಂಚಿನ ತಯಾರಿಕೆ 1200 ವರ್ಷಗಳ ಹಿಂದೆಯೆ ಭಾರತೀಯರಿಗೆ ಕರಗತವಾಗಿತ್ತು. ತಾಮ್ರ ಮತ್ತು ಸತುವಿನ ಮಿಶ್ರಣವಾದ ಹಿತ್ತಾಳೆ ವಿಶ್ವದಲ್ಲಿಯೆ ಮೊದಲು ತಯಾರಾದದ್ದು ಭಾರತದಲ್ಲಿ. ದೆಹಲಿಯ ಮೆಹರೌಲಿಯಲ್ಲಿರುವ 1500 ವರ್ಷಗಳಿಗೂ ಹಿಂದಿನ ಕಬ್ಬಿಣದ ಸ್ತಂಭ ಹೊರಮೈ ರಚನೆಯನ್ನಾಗಲಿ ಹೊಳಪನ್ನಾಗಲಿ ಕಳೆದುಕೊಳ್ಳದೆ ವಿಜ್ಞಾನಲೋಕದ ವಿಸ್ಮಯವೆನಿಸಿದೆ. ರಸಾಯನ ವಿಜ್ಞಾನದ ವಿವಿಧ ಶಾಖೆಗಳಲ್ಲಿ ಪ್ರಾಚೀನ ಕಾಲದ ಹಾಗೂ ಮಧ್ಯಯುಗದ ಭಾರತದ ಸಾಧನೆಯ ಸಂಕ್ಷಿಪ್ತ ಅವಲೋಕನ, ಈ ಗ್ರಂಥ.
Specification
Additional information
book-no | 103 |
---|---|
isbn | ISBN : 81-7531-149-9 |
author-name | |
published-date | 2009 |
language | Kannada |