Description
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಆಧಾರವನ್ನೇ ಅಲುಗಾಡಿಸಿದ ನೌಕಾ ಬಂಡಾಯವನ್ನು ಕುರಿತ ಪೂರ್ಣಪ್ರಮಾಣದ ಸಮಗ್ರಗ್ರಂಥ ಇದುವರೆಗೆ ಭಾರತದ ಯಾವುದೇ ಭಾಷೆಗಳಲ್ಲಿ ಬಂದಿಲ್ಲ. ಮದರಾಸು-ಕೊಚ್ಚಿಯಿಂದ ಕರಾಚಿವರೆಗೆ, ಮುಂಬಯಿಯಿಂದ ಕೋಲ್ಕತಾ ವಿಶಾಖಪಟ್ಟಣಗಳವರೆಗೆ ಕಾಳ್ಗಿಚ್ಚಿನಂತೆ ಹರಡಿದ ನೌಕಾಸೈನಿಕ ಬಂಡಾಯ ಭಾರತದ ಮೇಲೆ ಇಂಗ್ಲೆಂಡ್ ೧೫೦ ವರ್ಷಗಳಿಂದ ನಡೆಸಿದ್ದ ಆಧಿಪತ್ಯದ ಅವಸಾನವನ್ನು ಹತ್ತಿರವಾಗಿಸಿದ ಪ್ರಮುಖ ಘಟನೆ. ನೌಕಾಸೈನಿಕರು ತಮ್ಮ ಸರ್ವಸ್ವವನ್ನು ಒತ್ತೆಯಿಟ್ಟು ಪ್ರಭುತ್ವದ ವಿರುದ್ಧ ಮೆರೆದ ಶೌರ್ಯವಂತಿಕೆ, ಆಗಿನ ನಾಯಕರು ಪ್ರದರ್ಶಿಸಿದ ಸತ್ತ್ವಹೀನತೆ, ನೌಕಾಸೈನಿಕರ ಅಸೀಮ ತ್ಯಾಗದ ಬಗೆಗೆ ಸ್ವಾತಂತ್ರ್ಯೋತ್ತರ ದೇಶೀಯ ಸರ್ಕಾರವೇ ತೋರಿದ ದುರ್ಲಕ್ಷ್ಯ – ಇವುಗಳ ಸತ್ಯದರ್ಶನ ಈಗಿನವರಿಗೆ ಆಗಬೇಕಾಗಿದೆ. ಆ ಜ್ವಲಂತ ಪರ್ವದ ಬಗೆಗೆ ವಿರಳ ಮೂಲ ಆಕರಗಳ ಆಧಾರದಿಂದ ರಚಿಸಲಾಗಿರುವ ಶೋಧಗ್ರಂಥ ‘ನೌಕಾ ಬಂಡಾಯ 1946 – ಸಾಗರದಲ್ಲಿ ಅಗ್ನಿಶಿಖೆ’.
Specification
Additional information
book-no | 113 |
---|---|
isbn | ISBN : 81-7531-059-6 |
author-name | |
published-date | 2012 |
language | Kannada |