ಕರುನಾಡ ಹುಲಿ ಧೋಂಡಿಯ

90.00100.00 (-10%)

In stock

ಕ. ವೆಂ. ನಾಗರಾಜ್

Compare

90.00100.00 (-10%)

Description

ಭಾರತದ ನೈಜ ಇತಿಹಾಸ, ಅದರಲ್ಲೂ ಅಕ್ರಮಣಕಾರಿಗಳು-ವಸಾಹತುಶಾಹಿಗಳ ವಿರುದ್ಧ ಭಾರತೀಯರು ನಡೆಸಿದ ವೀರೋಚಿತ ಸಮರದ ಇತಿಹಾಸ ಭಾರತೀಯರ ಪೀಳಿಗೆ ಪೀಳಿಗೆಗೆ ತಲಪದಂತೆ ಮಾಡುವ ಪ್ರಯತ್ನ ಬ್ರಿಟಿಷರಿಂದಾಯಿತು; ಬ್ರಿಟಿಷರ ಗರಡಿಯಲ್ಲಿ ಪಳಗಿದ ಭಾರತೀಯ ಇತಿಹಾಸಕಾರರೂ ಹಲವರು ಅದೇ ಪ್ರಯತ್ನವನ್ನು ಮುಂದುವರಿಸಿದರು. ಇದರ ಪರಿಣಾಮವಾಗಿ ಇಂದಿಗೂ ನಾವು ನಮ್ಮ ಪೂರ್ವಜರ ಶೌರ್ಯ-ಪರಾಕ್ರಮಗಳನ್ನು ವಿವರವಾಗಿ ತಿಳಿದುಕೊಳ್ಳಲು, ನಮ್ಮ ಮುಂದಿನ ಪೀಳಿಗೆಗೆ ತಿಳಿಸಲು ಅಗತ್ಯವಿರುವ ಸಾಹಿತ್ಯದ ಕೊರತೆ ನಮ್ಮನ್ನು ಕಾಡುತ್ತಿದೆ.

ಇಂಥ ಸಂದರ್ಭದಲ್ಲಿ, ನಮ್ಮ ಚೆನ್ನಗಿರಿಯ ವೀರ ಧೋಂಡಿಯನನ್ನು ಕುರಿತು ವಿವರವಾದ ಕೃತಿಯೊಂದನ್ನು ರಚಿಸಿರುವ ಕ. ವೆಂ. ನಾಗರಾಜ್ ಅವರ ಕಾರ್ಯ ಶ್ಲಾಘನೀಯವಾದುದು. ೧೮೫೭ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಅರ್ಧ ಶತಮಾನಗಳಷ್ಟು ಮುಂಚೆಯೇ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಸಂಘಟಿಸಿದ್ದ ಧೋಂಡಿಯ ವಾಘ್ ನ ಪ್ರೇರಣಾದಾಯೀ ಕಥನ ನಮ್ಮ ಯುವಜನತೆಗೆ ಮಾರ್ಗದರ್ಶಿಯಾಗಲಿ ಎಂದು ಹಾರೈಸುವೆ.

ಡಾ| ಕೆಳದಿ ಗುಂಡಾಜೋಯಿಸ್

Main Menu

ಕರುನಾಡ ಹುಲಿ ಧೋಂಡಿಯ

ಕರುನಾಡ ಹುಲಿ ಧೋಂಡಿಯ

90.00100.00 (-10%)

Add to Cart

Select at least 2 products
to compare