Roll over image to zoom in
Description
ನವನಂದರ ದುರಾಡಳಿತದಿಂದಾಗಿ ರಾಜ್ಯದೆಲ್ಲೆಡೆ ತಾಂಡವವಾಡುತ್ತಿದ್ದ ಅರಾಜಕತೆಯಿಂದ ರಾಜ್ಯವನ್ನು ರಕ್ಷಿಸಿ, ಚಂದ್ರಗುಪ್ರಮೌರ್ಯನ ಮೂಲಕ ಸುಭದ್ರ ಆಡಳಿತವನ್ನು ಜಾರಿಗೊಳಿಸಿದ ಚಾಣಕ್ಯ, ಅದುವರೆಗಿನ ಶಾಸ್ತ್ರಕಾರರು – ನೀತಿ ನಿರೂಪಕರು ಏರ್ಪಡಿಸಿದ್ದ ವ್ಯವಸ್ಥೆಗಳಿಗೆ ತನ್ನದೇ ಆದ ಸೂತ್ರಗಳನ್ನು ರೂಪಿಸಿದ. ಕ್ರಿ. ಪೂ. 4ನೇ ಶತಮಾನದಲ್ಲಿ ಆತ ರಚಿಸಿದ ಅರ್ಥಶಾಸ್ತ್ರ ಇಂದಿಗೂ ಹಲವು ವಿಷಯ-ವಿಭಾಗಗಳಲ್ಲಿ ಅಧ್ಯಯನ-ಅನುಸರಣಯೋಗ್ಯವೆನಿಸಿರುವುದು ಅದರ ಸತ್ತ್ವವಂತಿಕೆಯ ಜೊತೆಗೆ ಚಾಣಕ್ಯನ ದೂರದರ್ಶಿತ್ವಕ್ಕೂ ನಿದರ್ಶನವಾಗಿದೆ. ಇಂಥ ಮಹತ್ತ್ವದ ಕೃತಿಯನ್ನು ಕುರಿತು ಪರಿಚಯಾತ್ಮಕವಾಗಿ ತಿ. ತಾ. ಶರ್ಮರು ಬರೆದ ಆರು ಲೇಖನಗಳ ಸಂಕಲನವೇ ‘ಆರ್ಯ ಚಾಣಕ್ಯನ ಅರ್ಥಶಾಸ್ತ್ರ’.
Specification
Additional information
author-name | |
---|---|
language | Kannada |
book-no | 138 |
published-date | 2019 |
isbn | 81-7531-086-3 |