Description
ಭುಗಿಲು
ಭಾರತದ 1975-77ರ ಜನಕ್ರಾಂತಿಯ ಸತ್ಯಕಥೆ
ಭಾರತದಲ್ಲಿ ಸ್ವಾತಂತ್ರ್ಯಸಿದ್ಧಿಯಾಗಿ ಪ್ರಜಾಪ್ರಭುತ್ವ ಜಾರಿಗೆ ಬಂದು ಇಪ್ಪತ್ತೇಳು ವರ್ಷಗಳಷ್ಟೆ ದಾಟಿದ್ದಾಗ (ಜೂನ್ 25, 1975) ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನವನ್ನೇ ಧೂಳೀಪಟ ಮಾಡಿ ದೇಶಾದ್ಯಂತ ‘ತುರ್ತುಪರಿಸ್ಥಿತಿ’ಯನ್ನು ಜಾರಿಗೊಳಿಸಿತು. ಪ್ರಜೆಗಳ ಎಲ್ಲ ಮೂಲಭೂತ ಹಕ್ಕುಗಳನ್ನು ಅಪಹರಣ ಮಾಡಿ ಕಾಂಗ್ರೆಸ್ಸೇತರ ರಾಷ್ಟ್ರನಾಯಕರನ್ನೂ ಪ್ರಜಾಪ್ರಭುತ್ವಪರ ಸಾಮಾಜಿಕ ಕಾರ್ಯಕರ್ತರನ್ನೂ ಜೈಲಿಗೆ ತಳ್ಳಿ ಅಪರಿಮಿತ ಹಿಂಸೆಯೊಡಗೂಡಿದ ಅಮಾನುಷ ಪೊಲೀಸ್ ರಾಜ್ಯವನ್ನು ಜಾರಿಗೊಳಿಸಿತು.
ತುರ್ತುಪರಿಸ್ಥಿತಿ ಎಂಬ ಇಪ್ಪತ್ತು ತಿಂಗಳ ಆ ಅತಿಘೋರ ದಮನಶಾಹಿಯಿಂದ ದೇಶವನ್ನು ಮುಕ್ತಗೊಳಿಸಲು ಸಾವಿರ ಸಾವಿರ ಮಂದಿ ತ್ಯಾಗಮಯ ದೇಶಪ್ರೇಮಿಗಳು ಬೆವರು-ರಕ್ತಗಳನ್ನು ನೀರಿನಂತೆ ಹರಿಸಬೇಕಾಯಿತು. ಎಷ್ಟೊ ಮಂದಿಯ ಬಲಿದಾನವೂ ಆಯಿತು.
ದೇಶದಾದ್ಯಂತ ನಡೆದ ಆ ಸ್ವಾತಂತ್ರ್ಯ ಸಂಘರ್ಷದ ಸಂಕ್ಷಿಪ್ತ ಚಿತ್ರಣದ ಜೊತೆಗೆ ಕರ್ನಾಟಕವು ಅದಕ್ಕೆ ಸಲ್ಲಿಸಿದ ವಿಶಿಷ್ಟ ಕಾಣಿಕೆಯ ವಿಸ್ತಾರವಾದ ವರ್ಣನೆ ಈ ಪುಸ್ತಕದಲ್ಲಿದೆ.






