Description
’ನಾಡವರು’ ಕರ್ನಾಟಕದ ಕರಾವಳಿಯ ಮೂರ‍್ನಾಲ್ಕು ತಾಲೂಕುಗಳಲ್ಲಿ ನೆಲಸಿರುವ, ಸಂಖ್ಯೆಯಲ್ಲಿ ನಲವತ್ತೊ, ಐವತ್ತೊ ಸಾವಿರದಷ್ಟೇ ಇದ್ದರೂ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾದ ಸಮುದಾಯ. ಶತಮಾನಗಳ ಹಿಂದೆ, ವಿವಿಧ ಸಂಸ್ಥಾನಗಳ ಸೇನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಡವರು ಕ್ರಮೇಣ ಕೃಷಿಕರಾಗಿ ಜೀವನ ನಡೆಸುತ್ತ, ಇದೀಗ ಬಹುತೇಕ ಶಿಕ್ಷಣಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವೆನಿಸುವ ಸಂಗತಿಯೆಂದರೆ, ಇಂದಿನ ನಾಡವರ ಹಲವು ಕುಟುಂಬಗಳಲ್ಲಿ ಮಕ್ಕಳನ್ನು ಹೊರತುಪಡಿಸಿ, ಉಳಿದವರೆಲ್ಲರೂ ಶಿಕ್ಷಕರು! ಈ ನಾಡವರೆಂಬ ಸಣ್ಣ ಸಮುದಾಯದ ಸಾಂಸ್ಕೃತಿಕ ದಾಖಲೆಯೇ ಈ ಕೃತಿ.