Description
ಅಸಲು ಈ ಭಾರತವೇ ಬಂದಿಯಾಗಿದ್ದಾಗ, ಬ್ರಿಟೀಷರ ಬೂಟಿನಡಿಯಲ್ಲಿದ್ದಾಗ, ಆ ಆಂಗ್ಲ ಪಿಶಾಚ ಮುಷ್ಟಿಯಲ್ಲಿ ವಿಲವಿಲನೆ ಮೇಲುಗಣ್ಣು ತೇಲುಗಣ್ಣಾಗಿದ್ದಾಗ, ಕೆಂಪು ಕೈಗಳು ನಮ್ಮ ಕುತ್ತಿಗೆಯನ್ನು ಹಿಸುಕುತ್ತಿದ್ದಾಗ… ಆ ದಾಸ್ಯ ಶೃಂಖಲೆಯನ್ನು ಕತ್ತರಿಸುವಲ್ಲಿ.
ಸಾವಿರಾರು ಕಾರಾಗ್ರಹಗಳ ಬೀಗ ತೆಗೆಯುವಲ್ಲಿ, ನಲುಗಿ ಸಾಯುತ್ತಿದ್ದ ನಮ್ಮವರನ್ನು ಎದ್ದು ನಿಲ್ಲಿಸುವಲ್ಲಿ, ಬ್ರಾಹ್ಮಣರ ಪಾತ್ರವೇನು ಎಂಬುದನ್ನು ಜಗತ್ತಿಗೆ, ಭಾರತೀಯರಿಗೆ, ಕೊನೆಗೆ ಬ್ರಾಹ್ಮಣರಿಗೆ (ಅಪರಾಧೀ ಭಾವದಿಂದ ನಿಂದನೆಯ ನೋವನ್ನು ನುಂಗಿಕೊಂಡು ಪರಿತಪಿಸುತ್ತಿರುವ ಬ್ರಾಹ್ಮಣರಿಗೆ) ಗೊತ್ತಾಗುವಂತೆ ಹೇಳಬೇಕು. ಅದೊಂದು ಅವಶ್ಯ ಕಾರ್ಯ. ಅನಿವಾರ್ಯ ಕೆಲಸ. ಅತ್ಯವಸರ ಕರ್ಮ. ಇಂತಹ ಕರ್ತ್ಯವ್ಯವನ್ನು ಮಾಡಿದ್ದಾರೆ ಛಾಯಾಪತಿಗಳು;
ಈ ’ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಾಹ್ಮಣರ ಪಾತ್ರ’ ಎಂಬ ಕೃತಿಯನ್ನು ಬರೆದು; ಹೊರತಂದು !!