Description
ಸೃಷ್ಟಿಶೀಲ ಬರೆಹದಲ್ಲಿ ತನ್ನತನದ ಹುಡುಕಾಟ
ತನ್ನತನವನ್ನು ಸೂಚಿಸುವ ‘ಸ್ವ’ತ್ವ ಪದವು ಬಹುತೇಕರಿಗೆ ಅಪರಿಚಿತ. ಸ್ವದೇಶೀ, ಸ್ವಭಾಷಾ, ಸ್ವಭೂಷಾ, ಸ್ವಭಾವ, ಸ್ವಗುಣ ಇತ್ಯಾದಿ ಹಲವು ಪದಗಳ ಪ್ರಾರಂಭದ ಉಪಸರ್ಗವಾಗಿ ಇರುವುದು ‘ಸ್ವ’. ನಮ್ಮ ಸಾಹಿತ್ಯದ ಸ್ವತ್ವವನ್ನು ಮರೆತುಬಿಡುವುದೂ ಸಲ್ಲ, ಅದನ್ನು ಹುಡುಕಾಡುವ ನಿಟ್ಟಿನಲ್ಲಿ ಪರಕೀಯ ನೆಲದ ಸಾಹಿತ್ಯದ ಮೊರೆಹೋಗುವುದೂ ಸಲ್ಲ ಮತ್ತು ಇದೇ ನಿಟ್ಟಿನಲ್ಲಿ ನಮ್ಮ ನೆಲದ ನಂಟಿನಿಂದ ಕಳಚಿಕೊಳ್ಳುವುದೂ ಸಲ್ಲ. ಇಲ್ಲಿ, ನಮ್ಮ ಸಾಹಿತ್ಯದ ಸ್ವತ್ವವನ್ನು ಕುರಿತು ಒಂದಿಷ್ಟು ತೊಡಗುವ ಪ್ರಯತ್ನವಿದೆ. ಅದಕ್ಕಾಗಿ; ಅಷ್ಟಿಷ್ಟು ಭಾರತೀಯ ಕಾವ್ಯಮೀಮಾಂಸೆಯನ್ನು ಸ್ಪರ್ಶಿಸಲಾಗಿದೆ. ಪ್ರಾಚೀನ ಕಾವ್ಯಗಳಾದ ರಾಮಾಯಣ ಮಹಾಭಾರತಗಳ ಕೆಲವು ಅಂಶಗಳನ್ನು ಎತ್ತಿಕೊಳ್ಳಲಾಗಿದೆ, ಕನ್ನಡದ ಸಾಹಿತ್ಯಪ್ರಪಂಚದೊಳಗೆ ಇನಿತು ಇಣುಕುವ ಯತ್ನಗೈಯಲಾಗಿದೆ. ಸಂಪುಟಸಂಪುಟಗಳಲ್ಲಿ ವಿಸ್ತರಿಸಬಹುದಾದ ನೋಟವೊಂದು ಇಲ್ಲಿ ಪುಟ್ಟ ಪುಸ್ತಿಕೆಯಾಗಿ ರೂಪುಪಡೆದಿದೆ.






