Description
ಮೂಲಶ್ಲೋಕಸಹಿತ
ಪಂಚತಂತ್ರ
ಪ್ರಾಣಿಪ್ರಪಂಚದ ನಡೆ, ನುಡಿ, ವ್ಯವಹಾರಗಳ ಮೂಲಕ ಮನುಷ್ಯಪ್ರಪಂಚಂದ ನಡೆನುಡಿಯನ್ನು ನೇರ್ಪಡಿಸುವ, ಹಾಗೂ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತಹ ಒಂದು ಅದ್ಭುತ ಪರಿಕಲ್ಪನೆ–ಅಂತರ್ದೃಷ್ಟಿಯು ಬಹುಶಃ ‘ಪಂಚತಂತ್ರದ‘ ಕರ್ತೃವಿನದೇ ಮೊಟ್ಟಮೊದಲನೆಯದೆನಿಸುತ್ತದೆ.
‘ಪಂಚತಂತ್ರ‘ದ ಕಥೆಗಳು ಭಾರತದಾದ್ಯಂತ ಪ್ರಚಲಿತವಾಗಿದ್ದು, ಕನ್ನಡದಲ್ಲಿಯೂ ಹಲವಾರು ಪುಸ್ತಕಗಳು ಬಂದಿವೆಯಾದರೂ, ಅಲ್ಲಿ ನಾವು ಕಾಣುವುದು ಕೇವಲ ಕಥೆಗಳನ್ನು ಮಾತ್ರ. ಆದರೆ ಸಂಸ್ಕೃತದ ಗ್ರಂಥಗಳನ್ನು ಮೂಲಶ್ಲೋಕಗಳು ಹಾಗೂ ಅವುಗಳ ಅರ್ಥವಿವರಣೆಯೊಂದಿಗೆ ಓದುವಾಗ ಉಂಟಾಗುವ ಅನುಭವ ವಿಶಿಷ್ಟವಾಗಿರುತ್ತದೆ. ಇಂತಹ ವಿಶಿಷ್ಟ ಅನುಭವವನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಅನುವಾದಿಸಿರುವ ಈ ಕೃತಿಯು ನೀಡುತ್ತದೆ.