Description
ತತ್ವಶಾಸ್ತ್ರದಲ್ಲಿ ಮನಸ್ಸಿನ ಸ್ವರೂಪ ವಿವೇಚನೆ
ಮನಸ್ಸು ಅಂದರೆ ಏನೆಂದು ನಮ್ಮ ಬುದ್ಧಿಗೂ, ಮನಸ್ಸಿಗೂ ಗೊತ್ತಿಲ್ಲ ಎಂದು ಹೇಳಬಹುದು. ಮನಸ್ಸು ಏನು ಎಂದು ನಮ್ಮ ಮನಸ್ಸಿಗೇ ಗೊತ್ತಿಲ್ಲ ಎಂದರೆ ಅದೊಂದು ವಿರೋಧಾಭಾಸ. ಮನಸ್ಸು, ಅದರ ಕ್ರಿಯೆ, ಅದರ ಸ್ಥಾನ, ಅದಕ್ಕೂ, ಆತ್ಮಕ್ಕೂ, ಬುದ್ಧಿಗೂ ಇರುವ ಸಂಬಂಧದ ಬಗ್ಗೆ ಪೂರ್ವದ, ಪಶ್ಚಿಮದ ಅನೇಕಾನೇಕ ಚಿಂತಕರು ಕಳೆದ ಎರಡು ಮೂರು ಸಾವಿರ ವರ್ಷಗಳಲ್ಲಿ ಸತತವಾಗಿ ಆಲೋಚನೆಯನ್ನು ಮಾಡುತ್ತ ಬಂದಿದ್ದಾರೆ. ನಮ್ಮಲ್ಲಿಯೂ ಕೂಡ ಶಾಸ್ತ್ರಗ್ರಂಥಗಳಲ್ಲಿ ವ್ಯವಸ್ಥಿತವಾಗಿ ಇದೆ. ಇಂಥ ಒಂದು ಚಿಂತನಧಾರೆಯನ್ನು ಪುಸ್ತಕರೂಪವಾಗಿ ತರುವ ಡಾ. ಸುಂಕಸಾಳರವರ ಈ ಪ್ರಯತ್ನ ತುಂಬ ಶ್ಲಾಘ್ಯವಾದದ್ದು.
ಡಾ. ಪ್ರಭಾಕರ್ ಜೋಶಿ






