Description
ಮಹಾಕಾಲ-2: ಸ್ಥಿತಿ (ಜಿ. ಬಿ. ಹರೀಶ)
ನೇತಾಜಿ ಸುಭಾಷ್ ಬೋಸ್ ಅವರ ಬಾಲ್ಯ ಹೇಗಿತ್ತು?
ಶಿವಾಜಿಯ ಆತ್ಮಸತ್ತ್ವವು ಅವರ ವ್ಯಕ್ತಿತ್ವಕ್ಕೆ ಹೇಗೆ ಮೆರುಗು ನೀಡಿತು?
ಶ್ರೀಮಂತ ಬಂಗಾಳಿ ಮನೆತನದಲ್ಲಿ ಜನಿಸಿದ ಯುವಕನು ಯಾಕೆ ಐಸಿಎಸ್ ಪರೀಕ್ಷೆ ಬರೆದು, ತೇರ್ಗಡೆಯಾದ ನಂತರವೂ ಯಾಕೆ ರಾಜೀನಾಮೆ ನೀಡಿದ?
ಗಾಂಧೀಜಿ–ನೆಹರು ಪರಿವಾರದೊಂದಿಗೆ ನೇತಾಜಿಗೆ ಏಕೆ ಭಿನ್ನಾಭಿಪ್ರಾಯ ಬಂತು?
ಕಾಂಗ್ರೆಸ್ಸಿನ ಒಳರಾಜಕೀಯದಲ್ಲಿ ನೇತಾಜಿಯ ವಿರುದ್ಧ ಏನೆಲ್ಲ ಪಿತೂರಿಗಳು ನಡೆದವು?
ಈ ಎಲ್ಲಾ ಪ್ರಶ್ನೆಗಳ ಸುತ್ತ ಕಥನ ಹೆಣೆಯುತ್ತಿರುವ ತ್ರಿವಳಿ ಕಾದಂಬರಿಯ ಎರಡನೆ ಭಾಗ
‘ಮಹಾಕಾಲ-2: ಸ್ಥಿತಿ’ — ನಮ್ಮ ಇತಿಹಾಸದ ಜೀವಂತ ಚಿತ್ರಣ!
ಮನುಷ್ಯರ ಆಕಾಂಕ್ಷೆ, ದುಗುಡ, ಅಸ್ಥಿರತೆ ಮತ್ತು ಕಾರ್ಯ–ಕಾರಣಗಳ ಕುಹಕ ಜಟಿಲತೆ…
ಪ್ರಥಮ ಭಾಗದ ಭಾರೀ ಯಶಸ್ಸಿನ ಬಳಿಕ ಬಹು ನಿರೀಕ್ಷಿತ ಕೃತಿಯನ್ನು ನೀವಿನ್ನೂ ಓದಿಲ್ಲವೆಂದಾದರೆ ಸಾಹಿತ್ಯಬುಕ್ಸ್.ಕಾಂ ವೆಬ್‌ಸೈಟ್‌ನಲ್ಲಿ ಖರೀದಿಸಿ
“ಅವಳಿಗೆ ತಲೆಸುತ್ತು ಬಂದಂತಾಯಿತು. ಅಂದರೆ ಏನು ಗಾಂಧೀಜಿ ಬಗ್ಗೆ ಬ್ರಿಟಿಷರಿಗೆ ಸಾಫ್ಟ್ ಕಾರ್ನರ್ ಇದೆ ಎನ್ನುವುದನ್ನು ಈ ಸಾಹಿತಿ ಇಷ್ಟು ಓಪನ್ ಆಗಿ ಬರೆದಿದ್ದಾನಲ್ಲ. ನಾವೆಲ್ಲ ಅವನ ಅನಿಮಲ್ ಫಾರಂ ಕಾದಂಬರಿ, ಡೌನ್ ಔಟ್ ಇನ್ ಲಂಡನ್ ಅಂಡ್ ಪ್ಯಾರಿಸ್ ಪ್ರಬಂಧಗಳನ್ನು ಈಗಲೂ ಅದರ ಇಂಗ್ಲಿಷ್ ಭಾಷೆಯ ಸೊಗಸಿಗೆ ಓದಿ, ಚಪ್ಪರಿಸುವೆವಲ್ಲ.. ಆದರೆ ಗಾಂಧೀಜಿಯವರನ್ನು ಇಪ್ಪತ್ತು ವರ್ಷಗಳ ಕಾಲ ಬ್ರಿಟಿಷರು ಯಾಕೆ ಅಷ್ಟು ಸೌಮ್ಯವಾಗಿ ನಡೆಸಿಕೊಂಡರು ಎಂಬುದರ ಕಡೆ ಸೋನಿಯಾ ಆರ್‌ವೆಲ್ ಮಾಡಿರುವ ಸಂಗ್ರಹ ಸ್ಪಷ್ಟವಾಗಿ ಬೆರಳು ತೋರಿಸುತ್ತಿದೆ! ವಿಶ್ವ ನೀನು ಯಾರೋ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಲೆಕೆಡಿಸಿಕೊಂಡಿದ್ದೀಯಾ, ಒಂದು ಪುಸ್ತಕ ಬರೆದು ಮುಗಿಸುತ್ತಿಯಾ ಅಂದುಕೊಂಡಿದ್ದೆ. ಆದರೆ 20ನೇ ಶತಮಾನದ ವಿಶ್ವ ರಹಸ್ಯದ ಗರ್ಭಕ್ಕೆ ಒಂದು ಕೀಲಿ ಕೈ ಹುಡುಕುತ್ತಿರುವೆ!”






