Roll over image to zoom in
Description
ಮಾಗಧ, ಈ ಕೃತಿಯು ಪ್ರಿಯದರ್ಶಿ ಅಶೋಕನ ಬಾಳಿನ ನಿರ್ಣಾಯಕ ಘಟ್ಟವನ್ನು ಆಧರಿಸಿ ನಾಲ್ಕು ನೆಲೆಗಳಲ್ಲಿ ರೂಪುಗೊಂಡಿದೆ. ಮುಖ್ಯವಾಗಿ ಅಶೋಕನ ಧರ್ಮಶಾಸನಗಳನ್ನು ಆಧರಿಸಿಯೇ ಇದು ಸಾಗುವ ಕಾರಣ ಅಧಿಕೃತೆಗೆ ಅವಧಾರಣೆ ಹಾಕಿದೆ. ಅಲ್ಲದೇ ಅರ್ಥಶಾಸ್ತ್ರದ ಅರ್ಥಪೂರ್ಣ ಅವಲಂಬನವೂ ಇದಕ್ಕಿದೆ. ಬರೀ ರಾಜಕೀಯವಾಗಲಿ, ಮತಮಥನವಾಗಲಿ ’ಮಾಗಧ’ದ ತಿರುಳನ್ನು ಆಕ್ರಮಿಸಿಲ್ಲ. ಹಾಗೆಂದು ಕೇವಲ ಸಾಮಾಜಿಕ ಕಾದಂಬರಿಗಳಂತೆ ಮಾನುಷ ಭಾವಗಳ ಮೇಲಾಟಕ್ಕೂ ಇದು ಸೀಮಿತವಾಗಿಲ್ಲ. ಇಲ್ಲಿರುವುದು ಭಾರತೀಯ ಇತಿಹಾಸದ ಬಹುಚರ್ಚಿತ ಘಟ್ಟವೊಂದರ, ಬಹುಮಾನಿತ ಸಮ್ರಾಜನೊಬ್ಬನ ಒಳಹೊರಗುಗಳನ್ನು ಹತ್ತಾರು ಕೋಣಗಳಿಂದ ಕಂಡು, ಕಾಣಿಸುವ ಕಲಾತ್ಮಕ ಕಥನ, ತಾತ್ವಿಕ ಶೋಧನ.