Description
ಕುರುಕ್ಷೇತ್ರ
ಕ್ಷಣ ಕ್ಷಣದ ಮಾಹಿತಿ
ಹದಿನೆಂಟು ದಿನದ ಯುದ್ಧ.
ಹದಿನೆಂಟು ಅಕ್ಷೌಹಿಣೀ ಸೈನ್ಯ.
ಅತಿರಥ-ಮಹಾರಥರ ಘನೋಪಸ್ಥಿತಿ.
ಐದು ತಲೆಮಾರಿನ ಯೋಧರ ಸಮ್ಮಿಲನ.
ಒಟ್ಟು ಸತ್ತವರು ಆರವತ್ತೆರಡು ಕೋಟಿ ಜನ.
ಅನೆ-ಕುದುರೆಗಳ ಲೆಕ್ಕವಿಲ್ಲ.
ಕೊನೆಗೆ ಉಳಿದದ್ದುು ಬೆರಳೆಣಿಕೆಯಷ್ಟು ಜನರಷ್ಟೇ.
ಇದು ಕುರುಕ್ಷೇತ್ರದ ಯುದ್ಧದ ಕಥೆ.
ಧರ್ಮಕ್ಷೇತ್ರದಲ್ಲಿ ಧರ್ಮರಕ್ಷಣೆಗಾಗಿ ನಡೆದ ಈ ಮಹಾಯುದ್ಧ ವಾಸ್ತವವಾಗಿ ನಡೆದದ್ದು ಹೇಗೆ?
ಮಹಾಭಾರತ ವಿವರಿಸುವ ಮಾಹಿತಿಗಳ ಸಂಗಮವೇ ಈ ಕೃತಿ.