Description
ಮೂರು ಭಾಗದಲ್ಲಿರುವ ಈ ಗ್ರಂಥವು ಮೊದಲ ಭಾಗದಲ್ಲಿ ಕಾಶೀಯಾತ್ರೆಯ ಅನುಭವದಲ್ಲಿ ಇದುವರೆಗೂ ಗುಪ್ತವಾಗಿರುವ ಬಹಳಷ್ಟು ಗಹನ ವಿಚಾರಗಳನ್ನು ನಿರೂಪಿಸಿದೆ. ಎರಡನೆಯ ಭಾಗದಲ್ಲಿ ಲೋಕಜೀವಿತದೊಳಗೆ ಮಿಸುಗುವ ಯೋಗಾಧ್ಯಾತ್ಮದ ಘಟನೆಗಳಿವೆ. ಮೂರನೆಯ ಭಾಗದಲ್ಲಿ ಭಾರತೀಯ ಯೋಗಾಧ್ಯಾತ್ಮದ ಚಿಂತನ–ಮಂಥನದ ವಿವೇಚನೆಯಿದೆ. ಕಣ್ಮರೆಯಾಗಿರುವ ಭಾರತೀಯ ಕಾಲಮಾನದ ಯುಗಚಕ್ರ ವಿಚಾರವೂ ಇಲ್ಲಿ ಮಥನಗೊಂಡಿದೆ.






