Description
ಮೂಲಶ್ಲೋಕಸಹಿತ
ಹಿತೋಪದೇಶ
ಅರಸುಮಕ್ಕಳು ಅರಿವುಗೇಡಿಗಳಾಗಿದ್ದರು. ವಿವೇಕಕ್ಕೂ ಅವಕ್ಕೂ ಆಗಿಬರುತ್ತಿರಲಿಲ್ಲ. ಜ್ಞಾನ, ವಿದ್ಯೆ, ಶಾಸ್ತ್ರ ಎಂದರೆ ಯೋಜನದೂರಕ್ಕೆ ಹಾರುತ್ತಿದ್ದರು. ಅಂಥ ಅವರಿಗೂ ಅರಿವೇ ಆಗದಂತೆ, ಅವರು ಖುಷಿಖುಷಿಯಾಗಿ ಕಿವಿಗೊಟ್ಟು ಆಲಿಸುವಂತೆ, ಮೈಮರೆತು ತಲ್ಲೀನರಾಗುವಂತೆ ಕಳಿಸಿದ ಹಿರಿಮೆ ಈ ಕೃತಿಯದ್ದು, ಹಾಗಾಗಿ ಜಗತ್ತಿನ ಮೊಟ್ಟಮೊದಲ ನಲಿ – ಕಲಿ ಶಿಕ್ಷಣಕ್ರಮ ಹಿತೋಪದೇಶದ್ದು.