Description
ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ
ಹಿಂದುತ್ವವು ಶಾಶ್ವತವಾದ ಹಾಗೂ ಕಾಲಕ್ಕೆ ಅನುಗುಣವಾಗಿರುವ – ಇವೆರಡನ್ನೂ ಒಗ್ಗೂಡಿಸಿಕೊಂಡು ನಡೆಯುವ ತರ್ಕ, ವಿಜ್ಞಾನ ಮತ್ತು ಅನುಭವಗಳಿಂದ ಸಾಬೀತಾಗಿರುವ ಸಿದ್ಧ ವಿಚಾರ. ಅದು ಯಾರ ವಿರೋಧಿಯೂ ಅಲ್ಲ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮತ್ತು ಎಲ್ಲರನ್ನೂ ಜೋಡಿಸುವ ವಿಚಾರ. ನಮ್ಮ ದೇಶದ ಎಲ್ಲಾ ನಾಗರಿಕರನ್ನು ಅವರ ಭಾಷೆ, ಉಡುಗೆ, ಆಹಾರ, ಪೂಜೆ, ಎಲ್ಲಾ ವೈವಿಧ್ಯಗಳನ್ನು ಒಪ್ಪಿಕೊಂಡು, ಅವರನ್ನು ಗೌರವಿಸುತ್ತ, ಎಲ್ಲರ ಅಭಿವೃದ್ಧಿಗೆ ಸಂಪೂರ್ಣ ಅವಕಾಶಗಳನ್ನು ನೀಡುವ ಮೂಲಕ ಒಟ್ಟಾಗಿ ಮುನ್ನಡೆಸುವ ವಿಚಾರ ಇದು.