Description
ಹಿಂದೂ ಹಬ್ಬಗಳ ಮಹತ್ವ
ಮಕ್ಕಳಿಗೆ ತಿಳಿಸಿ, ಸಂಸ್ಕೃತಿ ಬೆಳೆಸಿ, ಹಿಂದುತ್ವ ಉಳಿಸಿ
ಭಾರತದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬವೂ ಮನುಷ್ಯನ ಜೀವನೋತ್ಸಾಹವನ್ನು ಹೆಚ್ಚಿಸುವ ಆಶಯವನ್ನೇ ಹೊಂದಿದೆ. ಹಬ್ಬಗಳ ಹೆಸರಲ್ಲಿ ನಾವು ಹೆಚ್ಚು ಧಾರ್ಮಿಕರಾಗಬೇಕು. ಅಧ್ಯಾತ್ಮದ ಚಿಂತನೆ ನಡೆಸಬೇಕು. ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸಬೇಕು. ಕೌಟುಂಬಿಕ ಮೌಲ್ಯಗಳು ಭದ್ರವಾಗಬೇಕು. ಮುಖ್ಯವಾಗಿ ಮನುಷ್ಯ ಹೆಚ್ಚು ಮಾನವೀಯನಾಗಬೇಕು ಎಂಬುದೇ ಎಲ್ಲ ಹಬ್ಬಗಳ ಹಿಂದಿನ ತಿರುಳು. ಪ್ರತಿ ಹಬ್ಬದ ಆಚರಣೆಯೂ ವಿಭಿನ್ನ, ವಿಶಿಷ್ಟ, ಅದನ್ನು ಅರಿತು ಆಚರಿಸಿದರೆ ಅರ್ಥಪೂರ್ಣ. ಅಂಥ ಅರ್ಥವಂತಿಕೆಯಿಂದ ದೂರಾಗುತ್ತ ನಾವಿಂದು ಎಲ್ಲ ಹಬ್ಬಗಳನ್ನೂ ಹೊಸ ಬಟ್ಟೆ ತೊಟ್ಟು, ಒಬ್ಬಟ್ಟು ತಿಂದು, ಪ್ರವಾಸ ಹೋಗಿ ಬಂದು ಆಚರಿಸುವ ಮಟ್ಟಕ್ಕೆ ಇಳಿದಿದ್ದೇವೆ. ಕೆಲವರಿಗಂತೂ ಹಬ್ಬಗಳ ಆಚರಣೆಯೆಂಬುದು ವಾಟ್ಸಾಪ್ ಸ್ಟೇಟಸ್ಸಿಗೆ, ಫೇಸ್‍ಬುಕ್ ಪೋಸ್ಟಿಗೆ ಸೀಮಿತವಾಗಿರುತ್ತದೆ. ಇದು ಸರಿಯೇ ಎಂಬ ಚಿಂತನೆಯನ್ನು ಮಾಡುತ್ತ, ಹಬ್ಬಗಳ ನಿಜವಾದ ಅರ್ಥ, ಆಶಯ, ಆಚರಣೆಗಳ ಮಹತ್ವವನ್ನು ತಿಳಿಸುವ ಈ ಕೃತಿ ಭಾರತೀಯ ಸಂಸ್ಕೃತಿಯ ವೈಶಾಲ್ಯ-ವೈವಿಧ್ಯಗಳನ್ನು ಇಂದಿನ ತಲೆಮಾರಿಗೆ ಬಿಚ್ಚಿಡುವ ಕೆಲಸವನ್ನು ಮಾಡುತ್ತಿದೆ. ಹಬ್ಬಗಳನ್ನು ಅರಿತು ಆಚರಿಸೋಣ ಎನ್ನುತ್ತಿರುವ ಈ ಅರ್ಥಪೂರ್ಣ ಕೃತಿಯನ್ನು ಬರೆದಿರುವುದಕ್ಕಾಗಿ ಶ್ರೀಯುತ ಪ್ರಕಾಶ್ ನಾಡಿಗರನ್ನು ನಾವೆಲ್ಲ ಅಭಿನಂದಿಸೋಣ.






