Description
– ನಾ ಕಂಡಂತೆ ಶಿವಾಜಿ
೧೬೪೫ರ ಒಂದು ದಿನ, ಬಾಲ ಶಿವಾಜಿ ತನ್ನ ಆಪ್ತ ಗೆಳೆಯರೊಂದಿಗೆ “ಹಿಂದವೇ ಸ್ವರಾಜ್ಯ”ದ ಕಲ್ಪನೆಯ ಸಾಕ್ಷಾತ್ಕಾರಕ್ಕಾಗಿ ಪ್ರತಿಜ್ಞಾಬದ್ಧನಾಗುವ ಕ್ಷಣದಿಂದ ಹಿಡಿದು ಅವರ ಜೀವನದ ಎಲ್ಲ ಮುಖ್ಯ ಘಟ್ಟಗಳನ್ನು ವಿವರಿಸುತ್ತ ಅವರ ಅದಮ್ಯವಾದ ವ್ಯಕ್ತಿತ್ವವನ್ನು ಹಂತಹಂತವಾಗಿ ತೋರ್ಪಡಿಸುತ್ತಲೇ ಸಾಗುತ್ತದೆ ಇಲ್ಲಿಯ ಕಥನ. ಶಿವಾಜಿ ಮಾತ್ರವಲ್ಲ, ಇನ್ನಾವುದೇ ರಾಜನ ಕಥನ ಬಂದಾಗಲೂ, ಅವರ ಯುದ್ಧಾಭ್ಯಾಸ, ಕದನದಲ್ಲಿ ಅವರು ತೊಟುತ್ತಿದ್ದ ಪರಾಕ್ರಮ, ಅವರು ಗೆದ್ದುಕೊಂಡ ಕೋಟೆ ಕೊತ್ತಲಗಳ ವಿವರಣೆ – ಹೀಗೆ ಓದುಗರಿಗೆ ರೋಮಾಂಚನವೀವ ಸಂಗತಿಗಳೇ ಹೆಚ್ಚು ಇರುತ್ತವೆ.
ಶಿವಾಜಿಯನ್ನು ಒಂದು ಮಾದರಿ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ಆಶಿಸುವ ಪ್ರಾಜ್ಞರಿಗೆ ಈ ಗ್ರಂಥ ಒಳ್ಳೆಯ ಓದು!