Description
ಭಾರತೀಯ ಕಲಾಮೀಮಾಂಸೆಯಲ್ಲಿ ಭಟ್ಟತೌತನಿಗೆ ಹಿರಿದಾದ ಸ್ಥಾನವಿದೆ. ಅಭಿನವಗುಪ್ತನಂಥ ಸೀಮಾ ಪುರುಷನ ಗುರುವಾಗಿದ್ದ ತೌತ ಆತನ ಮೌಲಿಕ ಚಿಂತನಗಳಿಗೆ ಮೂಲಪ್ರೇರಣೆಯೂ ಹೌದು. ಇಂದು ಭಟ್ಟತೌತನ ಮಹಾಕೃತಿ ‘ಕಾವ್ಯಕೌತುಕ’ ನಮ್ಮ ಪಾಲಿಗೆ ಉಳಿದಿಲ್ಲವೆಂಬುದು ತುಂಬಲಾಗದ ನಷ್ಟ, ಸುದೈವದಿಂದ ಈ ವಿಶಿಷ್ಟ ಗ್ರಂಥದ ಹತ್ತಾರು ಸೂಕ್ತಿಗಳು ವಿವಿಧ ವಿದ್ವಾಂಸರ ಗ್ರಂಥಗಳಲ್ಲಿ ಉಲ್ಲೇಖಗೊಂಡು ಉಳಿದುಬಂದಿವೆ. ಇವುಗಳ ಮಹತ್ತ್ವ ಅಲ್ಪಸ್ವಲ್ಪದ್ದಲ್ಲ. ಇಂಥ ಅನೇಕ ತುಣುಕುಗಳನ್ನು ಮೊದಲ ಬಾರಿಗೆ ಒಗ್ಗೂಡಿಸಿ ಅವನ್ನು ವಿಸ್ತರಿಸಿ ವಿವರಿಸುವ ಪ್ರಯತ್ನ ಇಲ್ಲಿ ಸಾಗಿದೆ. ಈ ಮೂಲಕ ಭಾರತೀಯ ಕಲಾ ಮೀಮಾಂಸೆಯ ಮೂಲತತ್ತ್ವಗಳು ಮತ್ತಷ್ಟು ಸ್ಪಷ್ಟ ವಾಗುವುದರಲ್ಲಿ ಸಂದೇಹವಿಲ್ಲ.






