Description
“ನವೋದಯ ಯುಗದ ಪ್ರಮುಖ ಪ್ರಬಂಧಕಾರರಲ್ಲಿ ವಿ. ಸೀ. ಒಬ್ಬರು…ಅವರ ಪ್ರಬಂಧಗಳು ಕೊಡುವ ಸಂತೋಷದ ಒಂದು ಭಾಗ ಸೊಗಸಾದ ಗದ್ಯದ ಕೊಡುಗೆ, ಅದರ ಶೈಲಿ ಯಾವಾಗಲೂ ಸಂಭಾಷಣೆಗೆ ಹತ್ತಿರ. ಪ್ರಬಂಧಕಾರ ನಮ್ಮ ಮುಂದೆ ಕುಳಿತೇ ಮಾತನಾಡುತ್ತಿದ್ದಾರೆ ಎನ್ನಿಸುತ್ತದೆ. ಆದರೆ ಅದು ಮೂರ್ತ ಚಿತ್ರಮಯ…
ಈ ಪ್ರಬಂಧಗಳಲ್ಲಿ ಕ್ರಾಂತಿಕಾರಿ ವಿಚಾರವಿಲ್ಲ: ಇದನ್ನು ಓದುವಾಗ ರಕ್ತ ಕುದಿಯುವುದಿಲ್ಲ. ತೀವ್ರವಾಗಿ ಧಮನಿಗಳಲ್ಲಿ ನುಗ್ಗುವುದಿಲ್ಲ.ಆದರೆ ಒಂದೇ ಜಾಡಿನಲ್ಲಿ ನಡೆಯುವ ಮನಸ್ಸು… ನಮ್ರತೆಯನ್ನು, ವಿಶಾಲ ದೃಷ್ಟಿಯನ್ನು ಪಡೆದುಕೊಳ್ಳುತ್ತದೆ. ಹೊಸ ದೃಷ್ಟಿಯಿಂದ ಸುತ್ತಲಿನ ಬದುಕನ್ನು, ಚಿರಪರಿಚಿತ ಎಂದುಕೊಂಡ ವ್ಯಕ್ತಿಗಳನ್ನು ವಸ್ತುಗಳನ್ನು ಕಾಣುತ್ತದೆ… ಇಲ್ಲಿ ನಾವು ಲವಲವಿಕೆಯಾದ, ತನ್ನನ್ನು ತಾನೇ ಹಾಸ್ಯ ಮಾಡಿಕೊಂಡು ನಗಬಲ್ಲ, ಬದುಕನ್ನು ಗಾಢವಾಗಿ ಪ್ರೀತಿಸುವ ಸುಸಂಸ್ಕೃತವಾದ ಚೇತನದ ಸಹವಾಸದಲ್ಲಿದ್ದೇವೆ. ಇದು ಅಲ್ಪ ಭಾಗ್ಯವಲ್ಲ.”
– ಪ್ರೊ. ಎಲ್.ಎಸ್. ಶೇಷಗಿರಿ ರಾವ್






