Description
ಪೂರ್ಣಿಮಾ ಮಾಳಗಿಮನಿ ಅವರ ವೃತ್ತಿ ಜೀವನ ಅವರನ್ನು ವಿಶಿಷ್ಟವಾಗಿ ರೂಪಿಸಿರುವ ಚಿತ್ರಣ ಈ ಕೃತಿಯಲ್ಲಿದೆ. ಪುಟ್ಟ ಹಳ್ಳಿಯಿಂದ ಬಂದ ಪೂರ್ಣಿಮಾ ನವೋದಯ ಶಾಲೆಯಲ್ಲಿ ಓದಿ, ಆಕಸ್ಮಿಕವಾಗಿ ವಾಯುಸೇನೆ ಸೇರಿಕೊಂಡು, ತನಗೆ ಅಪರಿಚಿತವಾದ ಜಗತ್ತಿನಲ್ಲಿ ಅಡ್ಡಾಡಿದ ಪ್ರಸಂಗಗಳು ಈ ನೆನಪುಗಳ ಬುತ್ತಿಯಲ್ಲಿದೆ. ತಮಾಷೆ, ಭಾವುಕತೆ, ದಿಟ್ಟತನ ಮತ್ತು ಬೆರಗು ಹಾಸುಹೊಕ್ಕಾಗಿರುವ ಈ ಕಥನದಲ್ಲಿ ನಡೆದುಬಂದ ದಾರಿಯ ಹೆಜ್ಜೆಗುರುತುಗಳಿವೆ. ಸಹಜ ಕುತೂಹಲದಿಂದ ಓದಿಸಿಕೊಳ್ಳುವ ಕೃತಿ ಇದು.






