Roll over image to zoom in
Description
ಭಾರತದ ಹನ್ನೊಂದನೆಯ ರಾಷ್ಟ್ರಪತಿಗಳಾಗಿ, ವಿಜ್ಞಾನಿಗಳಾಗಿ, ತಾಂತ್ರಿಕ ಆಡಳಿತಗಾರರಾಗಿ, ಶಿಕ್ಷಕರಾಗಿ, ಚಿಂತಕರಾಗಿ ಡಾ. ಕಲಾಂ ಅವರು ತಾವು ಕಂಡುಂಡ ಅಪಾರ ಅನುಭವಗಳನ್ನು ಬಳಸಿಕೊಂಡು ಉತ್ತಮ ಪ್ರಭುತ್ವದ ದೃಷ್ಟಿಕೋನಗಳು ಹೇಗಿರಬೇಕೆಂದು ವಿಶದವಾಗಿ ಚರ್ಚಿಸಿದ್ದಾರೆ. ಈ ಕೃತಿಯಲ್ಲಿ ಭ್ರಷ್ಟಾಚಾರದ ನಿಗ್ರಹ, ಪ್ರಭುತ್ವ ಹಾಗೂ ತತ್ಸಂಬಂಧಿತ ಉತ್ತರದಾಯಿತ್ವ ಮುಂತಾದವುಗಳ ಬಗ್ಗೆ ವಾಸ್ತವಿಕ ನೆಲೆಗಟ್ಟಿನ ಸಲಹೆಗಳಿವೆ. ಪ್ರಾಮಾಣಿಕತೆಯಿಂದ, ನೇರ ನೈತಿಕತೆಯಿಂದ ಹಾಗೂ ಹೆಚ್ಚಿನ ಶ್ರಮದ ದುಡಿಮೆಯಿಂದ ಮಾತ್ರವೇ ನಾವು ಅಭಿವೃದ್ಧಿಗೊಂಡ ಭಾರತ ಎಂಬ ಉದ್ದಿಷ್ಟ ಕಾರ್ಯವನ್ನು ಸಾಧಿಸಬಹುದಾಗಿದೆ.