Description
ಪ್ರಜಾಪ್ರಭುತ್ವ ರಾಜ್ಯ ಪದ್ಧತಿಯ ಮೂಲಕಲ್ಪನೆಗಳನ್ನು ಕುರಿತು ಎಳೆ ವಯಸ್ಸಿನವರಿಗೆ ತಿಳಿವಳಿಕೆ ನೀಡಲು ಬರೆದ ಪತ್ರಗಳನ್ನು ಎಲ್. ಎಸ್. ಶೇಷಗಿರಿರಾವ್ ಅವರು ‘ನಾಳಿನ ನಾಡಶಿಲ್ಪಿಗೆ’ ಎಂಬ ಪುಸ್ತಕದ ರೂಪದಲ್ಲಿ ಕ್ರೋಢೀಕರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಎಂಬುದರ ಅರ್ಥವ್ಯಾಪ್ತಿ, ಸಮಾಜಕಲ್ಯಾಣ – ವ್ಯಕ್ತಿವಿಕಾಸಗಳ ನಡುವಣ ದ್ವೈತ, ಸಿದ್ಧಾಂತ – ಆಚರಣೆಗಳ ನಡುವೆ ಇಂದು ಕಾಣುತ್ತಿರುವ ಅಂತರಕ್ಕೆ ಕಾರಣ ಹಾಗೂ ಪರಿಹಾರ, ಜನನಾಯಕನಿಗೆ ಇರಬೇಕಾದ ಯೋಗ್ಯತೆ – ಇವೇ ಮೊದಲಾದ ಮೌಲಿಕ ವಿಷಯಗಳನ್ನು ಲೇಖಕರು ಇಲ್ಲಿ ಸಂಗ್ರಹಿಸಿದ್ದಾರೆ.
Specification
Additional information
author-name | |
---|---|
published-date | 1979 |
language | Kannada |