Roll over image to zoom in
Description
ಹಿಂದುಗಳು ವೇದಭೂಮಿಯಾದ ಸಿಂಧುಸ್ಥಾನದಿಂದ, ಸಿಂಧು ನದಿಯಿಂದ, ಸಿಂಧು ಸಮುದ್ರಗಳಿಂದ ತಮ್ಮ ಹೆಸರನ್ನು ಪಡೆದಿದ್ದಾರೆ. ಋಗ್ವೇದ ಎಷ್ಟು ಪ್ರಾಚೀನವೋ ಹಿಂದು ಹೆಸರು, ಹಿಂದು ಜನಾಂಗ, ಹಿಂದು ಧರ್ಮ ಅಷ್ಟೇ ಪ್ರಾಚೀನ ಎಂಬುದನ್ನು ಹಿಂದುತ್ವ ಕೃತಿಯಲ್ಲಿ ಸಾವರ್ಕರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಿಂದುತ್ವ ಅತ್ಯಂತ ವಿಶಾಲ ಪರಿಕಲ್ಪನೆ, ಹಿಂದು ಧರ್ಮ, ಸನಾತನ ಧರ್ಮ ಅದರ ಒಂದು ಭಾಗ ಮಾತ್ರ ಎಂಬುದು ಸಾವರ್ಕರ್ ಅವರ ಮುಖ್ಯ ಪ್ರತಿಪಾದನೆ.
ಹಿಂದುಗಳ ಪ್ರಾಮಾಣಿಕತೆ, ಧರ್ಮಶ್ರದ್ಧೆ, ಕವಿತ್ವ, ಪರಾಕ್ರಮದ ಕಥೆ ಈ ಗ್ರಂಥದ ಪ್ರತಿಯೊಂದು ಪುಟದಲ್ಲೂ ತುಂಬಿದೆ. ಹಿಂದುಗಳ ಭವ್ಯತೆ ಹಾಗೂ ಸದ್ಯದ ಆತಂಕದ ಪರಿಸ್ಥಿತಿಯ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಓದಬೇಕಾದ ಕೃತಿ ಸಾವರ್ಕರ್ ಅವರ ಹಿಂದುತ್ವ.