ಮೋದಿ ಮುಸ್ಲಿಂ ವಿರೋಧಿಯೇ ?
₹135.00₹150.00 (-10%)
ಗುಜರಾತಿನಲ್ಲಿ ನಿಜಕ್ಕೂ ನಡೆದದ್ದೇನು ? ಮೋದಿ ಮಾಡಿದ್ದೇನು ? – ಪ್ರತಾಪಸಿಂಹ
Description
ಅದು ಫೆಬ್ರವರಿ, 2002. ಗುಜರಾತ್ ಕೋಮುಗಲಭೆ ತುತ್ತತುದಿಯಲ್ಲಿತ್ತು. ನನಗೆ ಆಗಾ ಖಾನ್ರ ಕಚೇರಿಯಿಂದ ಫೋನ್ ಕರೆಯೊಂದು ಬಂತು. ಹಿಂದುಗಳೇ ಹೆಚ್ಚಾಗಿರುವ ಪ್ರದೇಶದ ಮಧ್ಯದಲ್ಲಿದ್ದ ಖೋಜಾ ಮುಸ್ಲಿಮರ ಕಾಲೋನಿಗೆ ದಾಳಿಯ ಬೆದರಿಕೆ ಇದೆಯೆಂದು ಅವರು ನನಗೆ ತಿಳಿಸಿದರು. ವಾಜಪೇಯಿಯವರ ಎನ್ ಡಿ ಎ ಸರಕಾರದಲ್ಲಿದ್ದ ಗ್ರಹ ಸಚಿವರಾಗಿದ್ದ ಎಲ್ ಕೆ ಆಡ್ವಾಣಿಯವರಿಗೆ ನಾನು ಫೋನ್ ಮಾಡಿದೆ. ಆಡ್ವಾಣಿ ಮೋದಿಯವರ ಜೊತೆ ಮಾತಾಡಿದರು. ಕೆಲವೇ ಕ್ಷಣಗಳಲ್ಲಿ ನರೇಂದ್ರ ಮೋದಿಯವರೇ ನನಗೆ ಕರೆ ಮಾಡಿ, “ನಜ್ಮಾ ಬೆನ್ ದಯವಿಟ್ಟು ನೀವು ಚಿಂತೆ ಮಾಡಬೇಡಿ, ನಾನು ವೈಯಕ್ತಿಕವಾಗಿ ಈ ಬಗ್ಗೆ ಗಮನಹರಿಸಿ ಅವರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತೇನೆ” ಎಂದರು ಹಾಗೂ ಮೋದಿ ತಮ್ಮ ಮಾತಿನಂತೆಯೇ ನಡೆದುಕೊಂಡರು. ಕೂಡಲೇ ಸೈನ್ಯವನ್ನು ಕಳಿಸಿ, ಆ ಕಾಲೋನಿಗೆ ಯಾವ ಅಪಾಯವೂ ಆಗದಂತೆ ನೋಡಿಕೊಂಡರು. ನನ್ನ ಅನುಭವದ ಪ್ರಕಾರ ಮೋದಿಯವರು, ಅವರ ಗಮನಕ್ಕೆ ಬಂದ ಎಲ್ಲಾ ದೂರುಗಳಿಗೂ, ಕರೆಗಳಿಗೂ ಸ್ಪಂದಿಸಿ ವೈಯಕ್ತಿಕವಾಗಿ ಅವುಗಳನ್ನು ಪರಿಹರಿಸಲು ಆಸ್ಥೆ ವಹಿಸಿದ್ದರು. ಮೋದಿಯವರು ಬೋಹ್ರಾ ಮತ್ತು ಖೋಜಾ ಮುಸ್ಲಿಂ ಸಮುದಾಯಕ್ಕೆ ಗಣನೀಯವಾದ ಸಹಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ನನ್ನ ಅರಿವಿಗೆ ಬಂದದ್ದೇನೆಂದರೆ ಬಿಜೆಪಿಯಲ್ಲಿ ಮಾತ್ರ ಮುಸ್ಲಿಮರಿಗೆ ಗೌರವಾರ್ಹ ಸ್ಥಾನ ಸಿಗುತ್ತದೆ.
ನಜ್ಮಾ ಹೆಪ್ತುಲ್ಲಾ – ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಅಬುಲ್ ಕಲಾಂ ಅಝಾದರ ಮರಿ ಸೊಸೆ ಹಾಗೂ ರಾಜ್ಯಸಭೆಯ ಮಾಜಿ ಉಪಸಭಾಧ್ಯಕ್ಷೆ