Roll over image to zoom in
Description
ಮಣಿಕಾಂತ್ ಬರೆದಿರುವ ಈ ಪುಸ್ತಕದಲ್ಲಿ ನಮ್ಮೆಲ್ಲರ ದೈನಂದಿನ ಬದುಕಿನ ಅವಮಾನಗಳಿವೆ. ಕೊರಗುಗಳಿವೆ. ಹಸಿವು, ಬಡತನ, ದಟ್ಟ ದಾರಿದ್ರ್ಯಗಳಿವೆ. ಆದರೆ ಎಂಥ ಕಗ್ಗತ್ತಲಿನ ಸುರಂಗದ ಆಚೆಗೂ ಒಂದು ಬೆಳಕಿನ ಮಂಡಲ ಇದ್ದೇ ಇರುತ್ತದೆ ಎನ್ನುವಂತೆ, ತನ್ನ ಬರಹಗಳಲ್ಲಿ ಸಕಲೆಂಟು ಕಪ್ಪುಬಿಳುಪುಗಳ ಕೊನೆಗೆ ಒಂದು ಕಾಮನಬಿಲ್ಲು ಎದ್ದು ನಿಲ್ಲುವಂತೆ ಮಾಡಿದ್ದಾರೆ ಲೇಖಕರು. ಇಲ್ಲಿರುವ ಬರಹಗಳೆಲ್ಲ ಸತ್ಯಕತೆಗಳು. ಒಟ್ಟಾರೆಯಾಗಿ ಇಡೀ ಪುಸ್ತಕ ಒಂದು ಲೌಕಿಕ ಭರವಸೆಯನ್ನು ಕಟ್ಟಿಕೊಡುವುದರಲ್ಲಿ ತನ್ನೆಲ್ಲ ಶಕ್ತಿಯನ್ನು ವಿನಿಯೋಗಿಸುತ್ತದೆ.