Description
ಪ್ರತಿಯೊಬ್ಬನಲ್ಲೂ ಸಾಧಕ ಅಡಗಿದ್ದಾನೆ. ಆದರೆ ಭಯ, ಹಿಂಜರಿಕೆ ಯಾರು ಎನೆಂದಾರು ಎನ್ನುವ ದಾಕ್ಷಿಣ್ಯಕ್ಕೆ ಒಳಗಾಗಿ ಕನಸುಗಳು ಅರಳುವ ಮುನ್ನವೇ ಬಾಡುತ್ತವೆ. ಜೀವನ ಇರೋದೇ ಅದನ್ನು ಪ್ರಿತಿಸಲು, ಅದಕ್ಕೆ ಅರ್ಥ ತುಂಬಲು ಎಂಬುದನ್ನು ಅರ್ಥ ಮಾಡಿಕೊಂಡರೆ ಹಳಹಳಿಕೆಗಳೆಲ್ಲ ಮಾಯವಾಗುತ್ತವೆ. ಈ ಬದುಕು, ಸಮಾಜ ಬದಲಿಸಿಕೊಳ್ಳಲು ನೂರು ದಾರಿಗಳಿವೆ. ಅದಕ್ಕೆ ನಾವು ಸಿದ್ಢರಾಗಬೇಕಷ್ಟೇ. ಅಂಥ ಹಲವು ವ್ಯಕ್ತಿತ್ವಗಳ ಯಶೋಗಾಥೆ ಈ ಪುಸ್ತಕದಲ್ಲಿದೆ.