Roll over image to zoom in
Description
ಕಾಳಿದಾಸನ ಕೃತಿಗಳಲ್ಲಿ ಶಬ್ದಾರ್ಥಗಳ ಸಮರಸದ ಮಾಧುರ್ಯ, ಲಾಲಿತ್ಯ ಅಡಗಿದೆ. ಭಾವಾತ್ಮಕ ಓಟಗಳಲ್ಲಿ ಚದುರಿದ ರಸ-ಭಾವಗಳನ್ನು ಸೆರೆಹಿಡಿದಿಟ್ಟಂಥ ಅವನ ಮುತ್ತಿನಂಥ ಮಾತು, ವಿಚಾರಧಾರೆ ’ಸುಭಾಷಿತ’ ಗಳಾಗಿ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಸಂಗ್ರಹರೂಪದಲ್ಲಿ ಪಡಿಮೂಡಿಬಂದಿದೆ. ಸಹಸ್ರಾರು ವರ್ಷಗಳಾದರೂ ಅವು ನಿತ್ಯಜೀವನಕ್ಕೆ ಅನ್ವಯಿಸುವ ಮೌಲಿಕ ಸಂದೇಶಗಳಿಂದ ಆಪ್ತವೆನಿಸುತ್ತವೆ. ನಾದ, ದೃಷ್ಟಾಂತ, ರೂಪಕಗಳಿಂದ ಪರಿಪುಷ್ಟಗೊಂಡ ಅವು ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳುವಂತಿವೆ.