Description
ಶ್ರೀ ಬಾಳಾಸಾಹೇಬ ದೇವರಸ್
ಸಾರ್ಥಕ ಬದುಕಿನ ಪರಿಚಯ
ಡಾ. ಕೇಶವ ಬಲಿರಾಮ ಹೆಡಗೇವಾರರು ಸಂಘಸೌಧಕ್ಕೆ ಸದೃಢ ತಳಹದಿ ಹಾಕಿಕೊಟ್ಟು ಇಹಲೋಕ ಯಾತ್ರೆ ಮುಗಿಸಿದರು.
ಭವ್ಯ ಸೌಧವನ್ನು ನಿರ್ಮಿಸಿದವರು ಮಾಧವ ಸದಾಶಿವ ಗೊಳ್ವಲ್ಕರ್ ಅವರು.
ಆರಂಭದ ದಿನಗಳಿಂದಲೇ ಡಾಕ್ಟರ್ ಜೀ ಹಾಗೂ ಗುರೂಜಿಯವರ ನಿಕಟ ಒಡನಾಟದಲ್ಲಿ ಪಕ್ವಗೊಂಡ ಬಾಳಾಸಾಹೇಬರು ಈ ಸೌಧದ ಆಂತರಿಕ ವ್ಯವಸ್ಥೆಗಳನ್ನು ರೂಪಿಸಿದವರು ಎಂದರೆ ಅತಿಶಯೋಕ್ತಿಯಾಗದು.
ಅವರಿಗೆ ಸಂಘದಿಂದ ಹೊರತಾದ ವೈಯಕ್ತಿಕ ಬದುಕೆಂಬುದೇ ಇರಲಿಲ್ಲ ಎಂದರೆ ತಪ್ಪಾಗದು. ಸಂಘದೊಡನೆ ಈ ಪ್ರಮಾಣದ ತಾದಾತ್ಮ್ಯ ಅವರದು.
ಸ್ವಯಂಸೇವಕನಾದ ಮೇಲೆ ಗಟನಾಯಕನಿಂದ ಮೊದಲ್ಗೊಂಡು ಸರಸಂಘಚಾಲಕರವರೆಗಿನ ವಿವಿಧ ಜವಾಬ್ದಾರಿಗಳ ನಿರ್ವಹಣೆ ಮಾಡಿರುವ ಅವರ ಬದುಕಿನ ಪ್ರೇರಣಾದಾಯಿಯಾದ ಅನೇಕ ಉದಾಹರಣೆಗಳು ಈ ಗ್ರಂಥದಲ್ಲಿ ಸಿಗುತ್ತವೆ.