ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್

450.00500.00 (-10%)

In stock

Compare

450.00500.00 (-10%)

Description

ಡಾ. ಬಾಬಾಸಾಹೇಬರ ಮೇರುವ್ಯಕ್ತ್ತಿತ್ವದ ಔನ್ನತ್ಯ ಹಾಗೂ ಅವರ ಜೀವನಕಾಲದ ಬಹುಮುಖ ಆಯಾಮಗಳು, ದಲಿತ ಸಮುದಾಯದ ಏಳ್ಗೆಗಾಗಿ ಅವರು ನಡೆಸಿದ್ದ ಹೋರಾಟಗಳು, ಅವರ ಚಿಂತನೆಯ ಆಳ ಮತ್ತು ವಿಸ್ತಾರ, ಸಂವಿಧಾನ ರಚನೆಯ ಭೀಮಕಾರ್ಯ ಮತ್ತು ಭೌದ್ಧಮತ ಸ್ವೀಕರಿಸಿದ ಅವರ ಯಥಾರ್ಥ ಮನೋಭೂಮಿಕೆ – ಇವುಗಳ ಆಧಾರ ಸಹಿತ ದರ್ಶನವನ್ನು ಈ ಕೃತಿಯಲ್ಲಿ ಕಾಣಬಹುದು. ಬಾಬಾಸಾಹೇಬರ ಬದುಕಿನ ಸಂಧ್ಯಾಕಾಲದ ಕೊನೆಯ ನಾಲ್ಕು ವರ್ಷಗಳಲ್ಲಿ ಅವರ ನಿಕಟ ಸಂಪರ್ಕದಲ್ಲಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಕಾರ್ಮಿಕ ನಾಯಕ ದತ್ತೋಪಂತ ಠೇಂಗಡಿ ಅವರು, ತಮ್ಮ ಈ ಸಾಮೀಪ್ಯದ ಮತ್ತು ಸ್ವೀಯ ಪರಾಮರ್ಶನೆಯ ಆಧಾರದ ಮೇಲೆ ಮರಾಠಿಯಲ್ಲಿ ಬರೆದ ’ಸಾಮಾಜಿಕ ಕ್ರಾಂತೀಚೀ ವಾಟಚಾಲ ಆಣಿ ಡಾ|| ಅಂಬೇಡ್ಕರ್, ಪುಸ್ತಕದ ಕನ್ನಡಾನುವಾದವೇ ’ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್’. ಇದು ಡಾ|| ಬಾಬಾ ಸಾಹೇಬರ ಜೀವನ ಚರಿತ್ರೆಯಲ್ಲ; ಆದರೆ ಅವರ ವ್ಯಕ್ತಿತ್ವ ಮತ್ತು ಜೀವನಕಾರ್ಯದ ಕುರಿತ ಅಧ್ಯಯನಪೂರ್ಣ ಶಬ್ದಚಿತ್ರ. ಪರಸ್ಪರ ಭೇಟಿಯಾದಾಗಲೆಲ್ಲ ಅವರಿಬ್ಬರ ನಡುವೆ ಗಂಭೀರ ವೈಚಾರಿಕ ಸ್ತರದಲ್ಲಿ ಸಂವಾದ ನಡೆಯುತ್ತಿತ್ತು. ಈ ಸಂವಾದ-ಜಿಜ್ಞಾಸೆಗಳಿಂದ ಠೇಂಗಡಿ ಅವರ ಈ ಕೃತಿಯು ಅಂಬೇಡ್ಕರ್ ಅವರ ಚಿಂತನರೀತಿಯನ್ನೂ ವಿಶಾಲ ದೃಗ್‌ಭೂಮಿಕೆಯನ್ನೂ ಪ್ರಖರ ರಾಷ್ಟ್ರೀಯತಾ ನಿಷ್ಠೆಯನ್ನೂ ಆಧಾರಭೂತವಾಗಿ ಎತ್ತಿ ತೋರಿಸಿದೆ.

Specification

Additional information

book-no

111

isbn

81-7531-057-X

author-name

moola

ದತ್ತೋಪಂತ ಠೇಂಗಡಿ

published-date

2011

language

Kannada

Main Menu

ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್

450.00500.00 (-10%)

Add to Cart