Roll over image to zoom in
Description
‘ನೋಡುವ ಬೀಡುಗಳು’ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಇಪತ್ತೆಂಟು ಸ್ಥಳಗಳ ಬಗೆಗಿನ ಪ್ರವಾಸಿ ಕೈಪಿಡಿ. ಈ ಪುಸ್ತಕವನ್ನು ಓದಿದಾಗ ಆಯಾ ಸ್ಥಳಗಳಿಗೆ ಪ್ರವಾಸ ಹೋದಂತೆ ಭಾಸವಾಗುತ್ತದೆ. ಸುಗಮ ತೀರ್ಥಯಾತ್ರೆಯ ಅನುಭವವಾಗುತ್ತದೆ. ಪುಸ್ತಕದಲ್ಲಿ ಒಂದೇ ಲೇಖನಿಯ ಬರಹವಿಲ್ಲ. ಆಯಾ ಸ್ಥಳಗಳ ಬಗ್ಗೆ ಕಂಡು ಅರಿತವರದ್ದೇ ಕೈಚಳಕವಿದೆ. ಒಂದು ಪ್ರದೇಶದ ಸ್ಥಳೀಯರೇ ತಮ್ಮ ಊರುಕೇರಿಗಳ ಬಗ್ಗೆ ಪರಿಚಯಿಸುತ್ತಾರೆ. ಹೀಗಾಗಿ ಅಪರಿಚಿತ ಜಾಗಗಳಲ್ಲಿಯೂ ಓದುಗರು ಎಡಹುವುದಿಲ್ಲ, ದಾರಿಗೆಡುವುದಿಲ್ಲ.
ಒಂದೊಂದು ‘ಬೀಡಿನ’ ಬಗ್ಗೆಯೂ ಒಂದೊಂದು ಸಂಶೋಧನಾ ಗ್ರಂಥವನ್ನೇ ರಚಿಸುವಷ್ಟು ವಿಷಯಗಳಿದ್ದರೂ, ಜನಸಾಮಾನ್ಯರ ತಿಳುವಳಿಕೆಗೆ ಹೊರೆಯಾಗದಂತಹ ಹಿತಮಿತ ಪರಿಚಯದ ಲೇಖನಗಳನ್ನು ಮಾತ್ರ ಇಲ್ಲಿ ಸಂಗ್ರಹಿಸಲಾಗಿದೆ.
Specification
Additional information
published-date | 1972 |
---|---|
language | Kannada |
author-name |