Roll over image to zoom in
Description
“ಇಂದು ನಮ್ಮ ಹೃದಯಗಳಲ್ಲಿ ಪ್ರಜ್ವಲಿಸುತ್ತಿರುವ ಸ್ವಾತಂತ್ರ್ಯದ ಜ್ವಾಲೆಯನ್ನು ಹಚ್ಚಿದ್ದು ನಿನ್ನ ಹೃದಯದಲ್ಲಿ ಧಗಧಗಿಸುತ್ತಿದ್ದ ಸ್ವಾತಂತ್ರ್ಯ ಜ್ವಾಲೆಗಳೇ. ಈ ಸ್ಮಾರಕ ಸ್ತಂಭದ ಮೇಲೆ ಬೆಳಗುತ್ತಿರುವ ಜ್ಯೋತಿಗಳೇ ನಿನ್ನಂಥ ವೀರ ಹುತಾತ್ಮನಿಗೆ ನಾವು ಸಲ್ಲಿಸುವ ಗೌರವಾರ್ಪಣೆ. ನಾವು ಬೆಳಕಿಗಾಗಿ ಹುಡುಕಾಡುವ ಸಂದರ್ಭ ಬಂದಾಗಲೆಲ್ಲ ನಿನ್ನ ಜ್ವಾಲೆಯ ಅಗ್ನಿ ಕಣ ಒಂದು ನಮ್ಮ ಹೃದಯಗಳನ್ನು ಬೆಳಗುತ್ತದೆ. ನಮಗೆ ದಾರಿದೀಪವಾಗುತ್ತದೆ.”
ಇದು ಒಬ್ಬ ವೀರಯೋಧನಿಗೆ ಇನ್ನೊಬ್ಬ ವೀರಯೋಧ ೧೯೪೩ರ ಫೆಬ್ರವರಿ ೧ರಂದು ಒಂದು ಸ್ಮಾರಕ ಸ್ತಂಭದ ಮುಂದೆ ನಿಂತು ತಲೆಬಾಗಿ ನವಿಸುತ್ತಿದ್ದ ಕ್ಷಣ. ಈ ವ್ಯಕ್ತಿ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್‌ಕರ್. ಆ ಸ್ಮಾರಕ ಯೋಧಾಗ್ರೇಸರ ಆದ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಡ್ಕೆ ಸ್ಮೃತಿಗಾಗಿ ನಿರ್ಮಿಸಲಾಗಿದ್ದ ಸ್ತಂಭ.