Description
ಹಿಂದಿನ ಮೈಸೂರು ಸಂಸ್ಥಾನದ ಪ್ರತಿಭಾವಂತ, ಸಮರ್ಥ ದಿವಾನರು. ಕಲೆಕ್ಟರ್ ಕಛೇರಿಯಲ್ಲಿ ಭಾಷಾಂತರಕಾರರಾಗಿ ಕೆಲಸ ಪ್ರಾರಂಭಿಸಿದವರು ದಿವಾನ ಪದವಿಯವರೆಗೆ ಏರಿದರು. ಸಂಸ್ಥಾನ ತುಂಬಾ ಕಷ್ಟ ಸ್ಥಿತಿಯಲ್ಲಿದ್ದಾಗ ಹಲವು ಕ್ರಮಗಳಿಂದ ಆದಾಯ ಹೆಚ್ಚಿಸಿದರು, ಅಭಿವೃದ್ಧಿಯ ರಾಜಮಾರ್ಗವನ್ನು ತೆರೆದರು. ಶಿವಸಮುದ್ರದ ವಿದ್ಯುತ್ ಉತ್ಪಾದನಾ ಯೋಜನೆ, ವಿಕ್ಟೋರಿಯಾ ಆಸ್ಪತ್ರೆ, ಮೈಸೂರಿನಿಂದ ಹರಿಹರದವರೆಗೆ ರೈಲು- ಇವು ಅವರ ಕೊಡುಗೆಗಳಲ್ಲಿ ಕೆಲವು. ದಕ್ಷತೆ, ದರ್ಪ, ದೊಡ್ಡತನ ಎಲ್ಲ ಅವರಲ್ಲಿ ಮನೆಮಾಡಿದ್ದವು.
Specification
Additional information
book-no | 274 |
---|---|
author-name | |
published-date | 1976 |
language | Kannada |