• ಪಾಠಶಾಲೆ | Patashale Kannada Book By Narayana Shevire

    ಪುಸ್ತಕದ ಹೆಸರು: ಪಾಠಶಾಲೆ
    ಲೇಖಕರು: ನಾರಾಯಣ ಶೇವಿರೆ
    ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
    ಹಲವು ಮುಖಗಳಲ್ಲಿ ‘ಶಿಕ್ಷಣ’ವನ್ನು ಕುರಿತ ಚರ್ಚೆ ಸದಾ ಜೀವಂತ. ಅದು ‘ಮುಗಿಯಿತು’ ಎಂದಾಗುವುದಿಲ್ಲ; ದಿನದಿನವೂ ಹೊಸ ಹೊಸ ಪ್ರಯೋಗಗಳು, ಹೊಸ ಹೊಸ ಹೊಳಹುಗಳು, ಹೊಸ ಹೊಸ ಅನುಭವಗಳು ಕಾಣಸಿಗುತ್ತವೆ. ಎಲ್ಲ ಸ್ತರ, ವರ್ಗ, ಭಾಷೆ, ಮತಗಳವರೂ ಇದರಲ್ಲಿ ಆಸಕ್ತರು; ಭಾಗಿಗಳು. ಒಬ್ಬರ ಅನುಭವ ಇನ್ನೊಬ್ಬರಿಗೆ ಪಾಠ; ಒಬ್ಬರ ಪ್ರಯೋಗ ಇನ್ನೊಬ್ಬರಿಗೆ ಮಾರ್ಗದರ್ಶಿ. ಈ ಹಿನ್ನೆಲೆಯಲ್ಲಿ, ಈಗಾಗಲೇ ನಡೆಯುತ್ತಿರುವ ಚರ್ಚೆಗಳಿಗೆ ಒಂದಷ್ಟು ಮೌಲಿಕ ಸರಕನ್ನು ಒದಗಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.

     

Main Menu