ಉತ್ಥಾನ ಎಸ್.ಕೆ. ರಾಮಚಂದ್ರರಾವ್ ಜನ್ಮಶತಾಬ್ದ ಸ್ಮರಣಾಂಜಲಿ
₹20.00
ದಯವಿಟ್ಟು,
Flat Shipping Method ಅನ್ನು ಪರಿಗಣಿಸಿ.
ಇದು ಉತ್ಥಾನದ ಹಳೆಯ ಸಂಚಿಕೆ ಆಗಿರುವುದರಿಂದ ಅಂಚೆ ವೆಚ್ಚ ಉಚಿತವಾಗಿರುವುದಿಲ್ಲ. ತಾವು ನೀಡಬೇಕಾಗಿದೆ.
Description
ಪುರವಣಿ ಕುರಿತು
ವೇದ ವೇದಾಂತ ವೇದಾಂಗಗಳು, ದರ್ಶನಶಾಸ್ತ್ರಗಳು, ಇತಿಹಾಸ-ಪುರಾಣಗಳು, ಬೌದ್ಧ-ಜೈನ ವಾಙ್ಮಯ, ಸಂಗೀತ-ಸ್ಥಾಪತ್ಯಾದಿ ಕಲೆಗಳು, ಮನಃಶಾಸ್ತ್ರ, ಆಯುರ್ವೇದ, ಹಲವು ಕೋಶಗಳು – ಈ ನಾಲ್ಕಾರು ಜ್ಞಾನಾಂಗಗಳಲ್ಲಿ ಪ್ರಭುತ್ವ, ಅರ್ಧಶತಮಾನಕ್ಕೂ ಹೆಚ್ಚು ಕಾಲ ಈ ವಿವಿಧ ವಿಷಯಗಳ ನಿರಂತರ ಅಧ್ಯಾಪನ-ಪ್ರವಚನ-ಉದ್ಬೋಧನ, ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿಸ್ಮಯಕರವೆನಿಸುವಷ್ಟು ವಿಪುಲ ಸಾಹಿತ್ಯ ನಿರ್ಮಿತಿ – ಹೀಗೆ ಬಹುಮುಖ ಶಾಸ್ತ್ರಪರಿಚರ್ಯೆಗೂ ಸಾಮಾಜಿಕ ಸಾರಸ್ವತೋಜ್ಜೀವನಕ್ಕೂ ತಮ್ಮ ಇಡೀ ಜೀವನವನ್ನು ಮುಡುಪಾಗಿಸಿ ’ಶಾಸ್ತ್ರ ಚೂಡಾಮಣಿ’, ’ವಿದ್ಯಾಲಂಕಾರ’ ಮೊದಲಾದ ತಮಗೆ ಸಂದ ಹಲವಾರು ಪ್ರಶಸ್ತಿಲಾಂಛನಗಳನ್ನು ಅನ್ವರ್ಥಗೊಳಿಸಿದವರು ಪ್ರೊ|| ಎಸ್.ಕೆ. ರಾಮಚಂದ್ರರಾವ್ (4-9-1925 – 2-2-2006). ಅವರ ಜನ್ಮಶತಾಬ್ದ ವರ್ಷದ (೨೦೨೪-೨೦೨೫) ಸಂದರ್ಭದಲ್ಲಿ ಆ ಮಹಾಮನೀಷಿಗಳ ಜೀವಿತಕಾರ್ಯದ ಹಲವು ಮುಖಗಳ ಸಾಂಕೇತಿಕ ಸ್ಮರಣೆಯ ಮೂಲಕ ಅವರ ಪಾವನ ಸ್ಮೃತಿಗೆ ಪ್ರಣಾಮಾಂಜಲಿಯನ್ನು ಅರ್ಪಿಸುವುದು ಇಲ್ಲಿಯ ಆಶಯ.