Description
“ಕುಟುಂಬ – ಒಂದು ಚಿಂತನ” ಮೌಲ್ಯಗಳು, ಸವಾಲುಗಳು, ಪರಿಹಾರ. ಭಾರತ ಜಗತ್ತಿಗೆ ನೀಡಿದ ಅತ್ಯಮೂಲ್ಯವಾದ ಕೊಡುಗೆ ಭಾರತೀಯ ಕುಟುಂಬ ಪದ್ಧತಿ ಮತ್ತು ಅದರ ಅವಿಭಾಜ್ಯ ಅಂಗವಾಗಿರುವ ಸಂಸ್ಕಾರಗಳು. ಆದರೆ ಇಂದು ಅವುಗಳ ಮೌಲಿಕ ರೂಪವು ಮರೆಯಾಗಿ, ಕಾಲಕ್ರಮೇಣ ದುರ್ಬಲಗೊಳ್ಳುತ್ತಿರುವುದು ಅನುಭವಕ್ಕೆ ಬರುತ್ತಿದೆ. ಕುಟುಂಬದೊಳಗಿನ ಅನೇಕ ಪದ್ಧತಿಗಳು ಮಾಸಲಾಗಿ, ಇನ್ನು ಕೆಲವು ಕೇವಲ ಯಾಂತ್ರಿಕ ಆಚರಣೆಯ ಮಟ್ಟಕ್ಕೆ ಇಳಿದಿರುವುದು ವಿಷಾದನೀಯ ಸತ್ಯವಾಗಿದೆ. ಈ ಪದ್ಧತಿಗಳು, ಸಂಸ್ಕಾರಗಳ ಹಿಂದೆ ಅಡಗಿರುವ ಅಪಾರವಾದ ಜ್ಞಾನವನ್ನು ಸಮಾಜಕ್ಕೆ ನೆನಪಿಸಿ ಪುನರುಜ್ಜೀವಿತಗೊಳಿಸಲು ಕಾರ್ಯತತ್ಪರವಾಗಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಚಟುವಟಿಕೆಯಾದ ಕುಟುಂಬ ಪ್ರಬೋಧನ. ಕಾಲಕಾಲಕ್ಕೆ ಸಮಾಜದ ಮಧ್ಯೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ, ಸಮಾಜವನ್ನು ಜಾಗೃತಗೊಳಿಸಬಲ್ಲ ಕೆಲವು ಸಾಹಿತ್ಯಗಳನ್ನೂ ಪ್ರಕಾಶಿತಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಹನ್ನೊಂದನೇ ಕೃತಿಯಾಗಿ “ಕುಟುಂಬ ಒಂದು ಚಿಂತನ” ಈಗ ತಮ್ಮ ಕೈ ಸೇರುತ್ತಿದೆ.